ಬೆಳಗಾವಿ, ಡಿ. 31 : ರಾಜ್ಯದ ಗಡಿಭಾಗದಲ್ಲಿ ಬೆಂಕಿ ಹಚ್ಚುತ್ತಿರುವ ಶಿವಸೇನೆ ಮತ್ತೆ ತನ್ನ ಕ್ಯಾತೆ ಮುಂದುವರಿಸಿದೆ.
ಸಿಎಂ ಬಿಎಸ್ ವೈ ಹಾಗೂ ಬಸವರಾಜ್ ಹೊರಟ್ಟಿ ಅಲ್ಲದೇ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ತಮ್ಮ ಪುಂಡಾಟಿಕೆಯನ್ನು ಶಿವಸೇನೆ ಕಾರ್ಯಕರ್ತರು ಮೆರೆದಿದ್ದಾರೆ.
ಕನ್ನಡ ಪರ ಸಂಘಟನೆಗಳ ವಿರುದ್ಧ ಶಿವಸೇನೆ ಸಮರ ಸಾರಿದ್ದು, ಹಲವೆಡೆ ಪ್ರತಿಭಟನೆಗೆ ಕರೆ ನೀಡಿದೆ. ಗಡಿಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪುಂಡರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.