ಸಿಡ್ನಿ, ಡಿ. 31 : ಮಾನಸಿಕ ಆರೋಗ್ಯ ಸಮಸ್ಯೆಯಿಂದ ಹೊರಬಂದು ಈಗಷ್ಟೇ ಬಿಗ್ ಬಾಷ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಪುನರಾಗಮನ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್, ಗ್ಲೆನ್ ಮ್ಯಾಕ್ಸ್ವೆಲ್ ಇದೀಗ ಸ್ಟೇಡಿಯಂ ಹೊರಗಡೆ ಅಗ್ನಿ ಅನಾಹುತವನ್ನು ಕಂಡ ಗ್ಲೆನ್ ಮ್ಯಾಕ್ಸ್ವೆಲ್ ತಕ್ಷಣ ಎಚ್ಚೆತ್ತುಕೊಂಡು ಅಗ್ನಿ ಆರಿಸುವ ಯಂತ್ರದೊಂದಿಗೆ ಬೆಂಕಿ ಆರಿಸುವ ಮೂಲಕ ಮೆಚ್ಚುಗೆಗೆ ಸೆಳೆದಿದ್ದಾರೆ.
ಬಿಗ್ ಬಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಗ್ಲೆನ್ ಮ್ಯಾಕ್ಸ್ವೆಲ್ ಮುನ್ನಡೆಸುತ್ತಿದ್ದಾರೆ. ಇದರಂತೆ ಲಾನ್ಸೆಸ್ಟನ್ ಪಂದ್ಯದ ಪೂರ್ವಭಾವಿಯಾಗಿ ಅಗ್ನಿ ಅವಘಡ ಸಂಭವಿಸಿತ್ತು.