ದೊಡ್ಡಬಳ್ಳಾಪುರ, ಡಿ. 30: ನಗರದಲ್ಲಿ ನಡೆಯುತ್ತಿರುವ 28ನೇ ಜಾಂಬೋರೇಟ್ ಶಿಬಿರ ಹೊಸ ಅನುಭವಗಳನ್ನು ನೀಡುತ್ತಿದೆ. ಶಾಲೆ, ಪುಸ್ತಕ, ಅಂಕಗಳ ಹಿಂದೆ ಓಡುತ್ತಿದ್ದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸೇರಿರುವ 5 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಿತ್ಯ ಒಂದಿಲ್ಲೊಂದು ಅನುಭವಗಳು ಜತೆಯಾಗುತ್ತಿವೆ. 7 ದಿನಗಳ ಶಿಬಿರದಲ್ಲಿ 3 ದಿನಗಳ ಕಾರ್ಯಕ್ರಮಗಳು ಮುಕ್ತಾಯವಾಗಿದ್ದು, ಮೂರು ದಿನದಲ್ಲಿ ಅನೇಕ ತರಬೇತಿಯನ್ನು ನೀಡಲಾಗಿದೆ. ಸಾಹಸ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು, ಚಾರಣ, ಪ್ರವಾಸ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಬದಲಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ.