ಉಗ್ರರ ಜತೆ ಪಾಕ್ ಸೇನೆ ಕುಚುಕು ಕುಚುಕು

ಉಗ್ರರ ಜತೆ ಪಾಕ್ ಸೇನೆ ಕುಚುಕು ಕುಚುಕು

ನವದೆಹಲಿ, ಡಿ.29 : ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಸುರಕ್ಷಿತ ಆಶ್ರಯ ಕಲ್ಪಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಮತ್ತು ಆರ್ಥಿಕ ಕಾರ್ಯಪಡೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಛೀಮಾರಿ ಹಾಕಿ ಎಚ್ಚರಿಕೆ ನೀಡಿದ್ದರೂ ಆ ದೇಶ ಉಗ್ರರೊಂದಿಗೆ ನಿಕಟ ಸಖ್ಯ ಮುಂದುವರಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಪಾಕಿಸ್ತಾನಿ ಸೇನಾ ಪಡೆಯ ಮುಖ್ಯ ವಕ್ತಾರ ಮೇಜರ್ಜನರ್ ಆಸೀಫ್ ಗಫೂರ್, ಕುಖ್ಯಾತ ಭಯೋತ್ಪಾದನೆ ಸಂಘಟನೆ ಜೈಷ್-ಎ-ಮಹಮದ್(ಜೆಇಎಂ) ಜೊತೆ ಆಪ್ತ ಸಂಬಂಧ ಹೊಂದಿರುವುದಕ್ಕೆ ಬಲವಾದ ಸಾಕ್ಷ್ಯಾಧಾರ ಲಭಿಸಿದೆ. ಬಂದರು ನಗರಿಕರಾಚಿಯಲ್ಲಿರನ್ ಕುಪ್ರಸಿದ್ಧ ಜಾಮಿಯಾ ರಶಿದಿಯಾ ಮದರಸಾಗೆ ಡಿ.27ರಂದು ಮೇಜರ್ಜನರಲ್ಆಫಿಫ್ಗಪೂರ್ ಭೇಟಿ ನೀಡಿ ಕುಖ್ಯಾತ ಉಗ್ರರೊಂದಿಗೆ ಇರುವ ಫೋಟೋಗಳು ಈಗ ಬಹಿರಂಗಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos