ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಪದಕ

ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಪದಕ

ಮಹದೇವಪುರ, ಡಿ. 26:  ಥೈಲ್ಯಾಂಡ್ ನ ಕಾಂಬೋಡಿಯಾನಲ್ಲಿ ಇತ್ತೀಚಿಗೆ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಪುನೀತ್ ರೆಡ್ಡಿ ಹಾಗೂ ಬೆಳ್ಳಿ ಪದಕ ಗೆದ್ದ ಚೇತನ್ ಗೌಡರವರನ್ನು ತಮ್ಮ ಸ್ವ ಗ್ರಾಮದಲ್ಲಿ ಅವರನ್ನು ಅದ್ದೂರಿ ಸ್ವಾಗತ ಕೋರಿದರು.

ವಿಶ್ವದ 3ನೇ ಮೋಹಿತ್ ಕಿಕ್ ಬಾಕ್ಸಿಂಗ್ ನಾಕ್ ಔಟ್ ಮಾಡಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿ ಪದಕ ತಂದ ವಿಜಯ ಶಾಲಿಗಳಿಗಳಿಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹದೇವಪುರ ಕ್ಷೇತ್ರದ  ಮಾರತಹಳ್ಳಿಯ ಮುನೇಕೊಳ್ಳಾಳ ವರಗೂ ಸ್ನೇಹಿತರು ರೋಡ್ ಶೋ ಮಾಡುವ ಮೂಲಕ ಈ ಸಾಧಕರಿಗೆ ಸ್ವಾಗತಿಸಿ ಪಟಾಕಿ ಹಚ್ಚಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

40 ರಾಷ್ಟ್ರಗಳಿಂದ 140 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದಿಂದ 6 ಜನಗಳ ಪೈಕಿ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದರು.

ಭಾರತಕ್ಕೆ1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದಿಕೊಳ್ಳುವ ಮೂಲಕ ವಿಜಯ ಸಾಧಿಸಿದ್ದರು, ನಮ್ಮ ಹೆಮ್ಮೆ ದೇಶಕ್ಕೆ ನಾವು ನೀಡಿದ ಕೊಡುಗೆ ಮತ್ತಷ್ಟು ಉತ್ಸಾಹ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಜೇತರಾದ ಪುನೀತ್  ಮಾತನಾಡಿ, ಎರಡು ವರ್ಷಗಳಿಂದ ಪಟ್ಟ ಕಠಿಣ ಪರಿಶ್ರಮದಿಂದ ಗೆಲುವು ಸಾಧ್ಯವಾಗಿದೆ. 2019ರಲ್ಲಿ ತೆರಳಬೇಕಾಗಿತ್ತು ಆದರೆ, 2019 ರಲ್ಲಿ ಕಾಲ ಕೂಡಿ ಬಂದಿದ್ದು, ಚಿನ್ನದ ಪದಕವನ್ನು ಗೆದ್ದು ಭಾರತದ ಹಿರಿಮೆ ಹೆಚ್ಚಿಸಲು ಅವಕಾಶ ಸಿಕ್ಕಿತು ಎಂದರು.

ಈ ಸಂದರ್ಭದಲ್ಲಿ  ಚಿನ್ನದ ಪದಕ ಗೆದ್ದ ಪುನೀತ್ ರೆಡ್ಡಿ ಹಾಗೂ ಬೆಳ್ಳಿ ಪದಕ ಗೆದ್ದ ಚೇತನ್ ಗೌಡ, ಕನ್ನಡ ಗಿರೀಶ್, ಸ್ಥಳೀಯ ಮುಖಂಡರಾದ  ರಾಜೇಶ್ ರೆಡ್ಡಿ, ಕಿಕ್ ಬಾಕ್ಸಿಂಗ್ ಪ್ರೇಮಿಗಳು ಸ್ಥಳೀಯರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos