ಬೆಂಗಳೂರು, ಡಿ. 26: ಕಂಕಣ ಸೂರ್ಯಗ್ರಹಣ ಕಾಲ ಆರಂಭವಾಗಿ ಭೂಮಿ ಸೂರ್ಯನ ನಡುವೆ ಚಂದ್ರ ಬಂದು ಸೂರ್ಯ ಗ್ರಹಣ ಸಂಭವಿಸಿದೆ.
ಬೆಳ್ಳಿ ಮೋಡಗಳ ನಡುವೆ ಬೆಂಕಿಯ ಬಳೆ ರೀತಿ ದುಬೈ ಅಬುಧಾಬಿಯಲ್ಲಿ ಅಪರೂಪದ ದೃಶ್ಯ ಕಂಡುಬಂದಿದೆ. ಕಂಕಣ ಸೂರ್ಯಗ್ರಹಣದ ಅಪರೂಪದ ದೃಶ್ಯವನ್ನು ಅಬುದಾಭಿ ಜನ ಕಣ್ತುಂಬಿಕೊಂಡಿದ್ದಾರೆ. ಸೋಲಾರ್ ಫಿಲ್ಟರ್ ಮೂಲಕ ವಿಶೇಷ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.
ಇನ್ನು ಹಲವೆಡೆ ಮೋಡ ಮುಸುಕಿದ ವಾತಾವರಣ ಇದ್ದು, ಗ್ರಹಣ ವೀಕ್ಷಣೆಗೆ ಅಡ್ಡಿಯಾಗಿದೆ. ಉಡುಪಿಯಲ್ಲಿ ಬೆಳಿಗ್ಗೆಯೇ ಕತ್ತಲು ಆವರಿಸಿದೆ. ಬೆಳ್ಳಿ ಮೋಡಗಳ ನಡುವೆ ಬೆಂಕಿಯ ಬಳೆಯ ರೀತಿ ಸೂರ್ಯನ ಸುತ್ತ ಬೆಳಕಿನ ಗೆರೆ ಕಂಡು ಬಂದಿದೆ. ಕಂಕಣ ಸೂರ್ಯಗ್ರಹಣದ ಸೌರವ್ಯೂಹದ ಅಪರೂಪದ ವಿದ್ಯಮಾನ ಇದಾಗಿದ್ದು, ನೆರಳು ಬೆಳಕಿನಾಟದ ಕೌತುಕವನ್ನು ಜನ ಕಣ್ತುಂಬಿಕೊಳ್ಳತೊಡಗಿದ್ದಾರೆ.