ಇಂದು ಕಂಕಣ ಸೂರ್ಯಗ್ರಹಣ ಆರಂಭ

ಇಂದು ಕಂಕಣ ಸೂರ್ಯಗ್ರಹಣ ಆರಂಭ

ಬೆಂಗಳೂರು, ಡಿ. 26: ಇಂದು ಅತ್ಯಂತ ಅಪರೂಪವಾದ ಕಂಕಣ ಸೂರ್ಯಗ್ರಹಣ ಘಟಿಸಿದ್ದು, ಭಾರತದಲ್ಲಿ ಗೋಚರಗೊಂಡಿದೆ.

ದೇಶದಲ್ಲಿಯೇ ಅತೀ ಹೆಚ್ಚು ಸ್ಪಷ್ಟವಾಗಿ ಗ್ರಹಣ ಗೋಚರಿಸಲಿರುವುದು ಕರ್ನಾಟಕದಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಎಂಬುದು ವಿಶೇಷ. ಬೆಳಗ್ಗೆ 8 ಘಂಟಿ  6 ನಿಮಿಷಕ್ಕೆ ಪ್ರಾರಂಭವಾಗಿದ್ದು,  11, 11 ಗಂಟೆಯವರೆಗೆ ನಡೆಯಲಿರುವ ಸೂರ್ಯನ ಕಂಕಣ ಗ್ರಹಣ ಸೌರಮಂಡಲ ಮತ್ತು ಸೂರ್ಯನ ಕುರಿತು ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಿದೆ.

ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇದೆ. ಈ ಹಿನ್ನೆಲೆ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬಳೆಯ ಆಕಾರದಲ್ಲಿ ಸೂರ್ಯ ಗೋಚರ ಆಗುತ್ತಾನೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.  ಆದರೆ ಮೋಡಗಳು ದಟ್ಟವಾಗಿ ಆವರಿಸಿಕೊಂಡರೆ, ಮೋಡ ಮುಸುಕಿದ ವಾತಾವರಣವಿದ್ದರೆ ಸೂರ್ಯಗ್ರಹಣ ಗೋಚರವಾಗುವುದಿಲ್ಲ ಎಂದು ಸಹ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪಾರ್ಶ್ವಗ್ರಹಣ ಗೋಚರವಾಗುತ್ತದೆ. ಹೆಚ್ಚು ಮೋಡ ಇರುವುದರಿಂದ ಕಂಕಣ ಸೂರ್ಯ ಗ್ರಹಣ ಗೋಚರವಾಗುವುದಿಲ್ಲ. ಬೆಂಗಳೂರು ನಗರದಲ್ಲಿ ಶೇ. 90ರಷ್ಟು ಸೂರ್ಯಗ್ರಹಣ ಗೋಚರವಾಗುತ್ತದೆ. ಮಡಿಕೇರಿ, ಚಾಮರಾಜನಗರ, ಊಟಿ, ಕಣ್ಣೂರು, ಕೊಯಮತ್ತೂರು, ಮಧುರೈನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆ ಎಂದು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos