ಬೆಂಗಳೂರು, ಡಿ.25 : ಜಿಮ್ ರವಿ ಎಂದು ಖ್ಯಾತರಾಗಿರುವ ಎ.ವಿ.ರವಿ ಅವರು ಡಿ. 28 ಹಾಗೂ 29ರಂದು ರಾಷ್ಟ್ರೀಯ ದೇಹದಾಢ್ರ್ಯ ಮತ್ತು ಫಿಟ್ನೆಸ್ ಚಾಂಪಿಯನ್ಶಿಪ್ ಆಯೋಜಿಸಿದ್ದಾರೆ. ಬೆಂಗಳೂರಿನ ನಾಗರಬಾವಿ ಬಡಾವಣೆಯಲ್ಲಿರುವ ಕೆಎಲ್ಇ ಸಭಾಂಗಣದಲ್ಲಿ ಈ ಸ್ಪರ್ಧೆಯು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10ರ ವರೆಗೆ ನಡೆಯುತ್ತದೆ.
ಭಾರತ್ ಶ್ರೀ, ಭಾತ್ ಕುಮಾರ್, ಭಾರತ್ ಕಿಶೋರ್, ಭಾರತ್ ಉದಯ್, ಭಾರತ್ ಕೇಸರಿ, ಮಿಸ್ಟರ್ ಫಿಟ್ನೆಸ್ ಎಂಬ ವಿಭಾಗಗಳಿಗೆ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸುಮಾರು 300 ಜನ ಸ್ಪರ್ಧಿಸಲಿದ್ದಾರೆ ಎಂದು ರವಿ ತಿಳಿಸಿದ್ದಾರೆ.