ಜಾರ್ಖಂಡ್ ನಲ್ಲಿ ಜಯ ಯಾರಿಗೆ..?

ಜಾರ್ಖಂಡ್ ನಲ್ಲಿ ಜಯ ಯಾರಿಗೆ..?

ರಾಂಚಿ, ಡಿ. 23 : ಜಾರ್ಖಂಡ್ ದಲ್ಲಿ ಮಹಾಮೈತ್ರಿಕೂಟ- ಬಿಜೆಪಿ ಹಾವು ಏಣಿ ಆಟ ಆರಂಭವಾಗಿದೆ. ಆರಂಭದಲ್ಲಿ ಜೆಎಂಎಂ- ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿ ಸಮಬಲದ ಹೋರಾಟದಲ್ಲಿದೆ. ಹಾಲಿ ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಬಿಜೆಪಿ ಆರಂಭಿಕ ಹಿನ್ನಡೆ ಸಾಧಿಸಿದೆ.
ಬಿಜೆಪಿ 34 ಕ್ಷೇತ್ರಗಳಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ 18 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿ) ಆರ್ ಜೆಡಿ ಎರಡು, ಎಜೆಎಸ್ ಯು ಏಳು ಮತ್ತು ಜೆವಿಎಂ ಮೂರು ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರ ಆರಂಭವಾಗಿದ್ದು, ನ.30ರಿಂದ ಡಿ. 20ರವರೆಗೆ ಒಟ್ಟು ಐದು ಹಂತಗಳಲ್ಲಿ ಮತದಾನ ನಡೆದಿತ್ತು.

ಜಾರ್ಖಂಡ್ ವಿಧಾನಸಭಾ ಚುನಾವಣಾ ಮತದಾನವೂ ಐದು ಹಂತಗಳಲ್ಲಿ ಮುಕ್ತಾಯಗೊಂಡಿದೆ. ಇನ್ನೇನು ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಈಗ ಎಲ್ಲರ ದೃಷ್ಟಿಯಂತೂ ಫಲಿತಾಂಶದ ಮೇಲೆ ನೆಟ್ಟಿದೆ. ಈಗಾಗಲೇ ಸಿವೋಟರ್ ಸೇರಿದಂತೆ ಹಲವು ಮಾಧ್ಯಮಗಳು ತಾ ಮುಂದು ನಾ ಮುಂದು ಎನ್ನುವಂತೆ ಸ್ಪರ್ಧೆಗೆ ಬಿದ್ದು ರಾಜ್ಯದ 81 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ಭವಿಷ್ಯ ನುಡಿದು ಬಿಟ್ಟಿವೆ

ಫ್ರೆಶ್ ನ್ಯೂಸ್

Latest Posts

Featured Videos