ಬೆಂಗಳೂರು, ಡಿ. 22 : ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಖ್ಯಮಂತ್ರಿಯವರನ್ನು ಮಾತನಾಡಿಸಲು ಮುಂದಾದ ವೇಳೆ ನಿರಾಕರಿಸಿದ ಘಟನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದಿದೆ.
ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನೂತನ ಶಾಸಕರು ಅಧಿಕಾರ ಸ್ವೀಕಾರ ಸಮಾರಂಭ ಮುಗಿದ ಬಳಿಕ ಶರತ್ ಬಚ್ಚೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾತನಾಡಿಸಲು ಮುಂದಾದರು. ಸಮಾರಂಭ ಮುಗಿದ ನಂತರ ಶರತ್ ಬಚ್ಚೇಗೌಡ ಗುಂಪಿನಲ್ಲಿದ್ದ ಸಿಎಂ ಅವರನ್ನು ಸೌಹಾರ್ದಯುತವಾಗಿ ಮಾತನಾಡಿಸಲು ಮುಂದೆ ಬಂದಾಗ ಯಡಿಯೂರಪ್ಪ ನೋಡಿಯೂ ನೋಡದಂತೆ ವರ್ತಿಸಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಬಚ್ಚೇಗೌಡ ತಕ್ಷಣವೇ ಹಿಂದೆ ಸರಿದರು.