ಮೈಸೂರು, ಡಿ. 21 : ವಿಚಾರ ಸಂಕಿರಣಕ್ಕಾಗಿ ಮೈಸೂರಿಗೆ ಸಂಜೆ ಗಾಂಧಿ ಮೊಮ್ಮಗ ರಾಜಮೋಹನ್ ಗಾಂಧಿ ಆಗಮಿಸಿದ್ದಾರೆ.ಮೈಸೂರು ವಿಶ್ವ ವಿದ್ಯಾಲಯ ಗೆಸ್ಟ್ ಹೌಸ್ನಲ್ಲಿ ಉಳಿದಿದ್ದ ಅವರು ಶನಿವಾರ ಬೆಳಿಗ್ಗೆ ಗಾಂಧಿ ಭವನದ ಆವರಣದಲ್ಲಿ ಮುಂಜಾನೆಯ ವಾಯುವಿಹಾರ ನಡೆಸಿದರು. ವಿಶ್ವವಿದ್ಯಾಲಯದ ಸಿಬ್ಬಂದಿ ಗಾಂಧಿ ಭವನ, ಸ್ಮಾರಕ, ಗಾಂಧಿ ಕಲಾಕೃತಿಗಳ ವೀಕ್ಷಣೆಗೆ ಆಹ್ವಾನ ನೀಡಿದರೂ, ನೋಡಲು ಮುಂದಾಗದೆ ವಾಯುವಿಹಾರವನ್ನಷ್ಟೇ ನಡೆಸಿದರು. ತಮ್ಮ ಭೇಟಿಗೆ ಬಂದವರ ಕುಶಲ ವಿಚಾರಿಸುತ್ತಲೇ ಬಿರುಸಿನಿಂದ ನಡೆದರು.