ತಾಯಿ ಪ್ರೀತಿಗಿಂತ ಮಿಗಿಲಾದುದು ಬೇರೆ ಇಲ್ಲ

ಡಿ.21 : ತಾಯಿ ಪ್ರೀತಿಗಿಂತ ಮಿಗಿಲಾದುದು ಬೇರೆ ಇಲ್ಲ. ಏಕೆಂದರೆ ಮಕ್ಕಳ ರಕ್ಷಣೆಗೆ ತಾಯಿ ಎಂತಹುದೇ ತ್ಯಾಗಕ್ಕೂ ಸಿದ್ಧಳಾಗಿರುತ್ತಾಳೆ.
ತಾಯಿ ಪ್ರೀತಿ ಮಾನವರಲ್ಲಿ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಲ್ಲೂ ಒಂದೇ ಆಗಿರುತ್ತದೆ ಎಂಬುದನ್ನು ಪ್ರವೀಣ್ ಕಸ್ವಾನ್ ಎಂಬ ಐಎಫ್ಎಸ್ ಅಧಿಕಾರಿ ಹಂಚಿಕೊಂಡಿರುವ ಪಕ್ಷಿಯ ವಿಡಿಯೋ ಸ್ಪಷ್ಟಪಡಿಸುತ್ತದೆ.
“ತಾಯಿ ಪ್ರೀತಿ ಎಂದರೆ ಅದು. ಯಂತ್ರ ಮೇಲೆರಗುತ್ತಿದ್ದರೂ ತನ್ನ ಮೊಟ್ಟೆಗಳನ್ನು ಬಿಟ್ಟು ಹೋಗದಿರಲು ನಿರ್ಧರಿಸಿತ್ತು. ರೈತನೂ ಯಂತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿ ಪಕ್ಷಿ ಹಾಗೂ ಮೊಟ್ಟೆಗಳಿಗೆ ಏನೂ ಆಗದಂತೆ ನೋಡಿಕೊಂಡಿದ್ದಾನೆ” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ.
43 ಸೆಕೆಂಡ್ಗಳ ವಿಡಿಯೋದಲ್ಲಿ ಪಕ್ಷಿ ಮೊಟ್ಟೆಗಳ ಮೇಲೆ ರಕ್ಷಣೆಗೆ ನಿಂತಿರುತ್ತದೆ. ಅದೇ ಮಾರ್ಗದಲ್ಲಿ ಕೃಷಿ ಯಂತ್ರ ಬರುವುದನ್ನು ಕಂಡರೂ ಪಕ್ಷಿ ಬೇರೆಡೆ ಹೋಗಲ್ಲ. ಬದಲಾಗಿ ರೆಕ್ಕೆಗಳನ್ನು ಅರಳಿಸಿ ನಿಲ್ಲುತ್ತದೆ. ಯಂತ್ರ ಮೇಲೆರಗಿಬಂದಾಗ ಕದಲದೆ ಜೀವ ರಕ್ಷಣೆಗೆ ಹಾರಿಹೋಗದೆ ಮೊಟ್ಟೆಗಳ ರಕ್ಷಣೆಗೆ ಮತ್ತಷ್ಟು ರೆಕ್ಕೆ ಅರಳಿಸಿ ನಿಲ್ಲುತ್ತದೆ. ರೈತನೂ ಪಕ್ಷಿಯ ಬಗ್ಗೆ ಕಳಕಳಿ ತೋರಿ ಅವುಗಳಿಗೆ ತೊಂದರೆಯಾಗದಂತೆ ಯಂತ್ರವನ್ನು ಜೋಪಾನವಾಗಿ ಪಕ್ಕಕ್ಕಿಡುತ್ತಾನೆ.

ಫ್ರೆಶ್ ನ್ಯೂಸ್

Latest Posts

Featured Videos