ಮಂಡ್ಯ, ಡಿ. 21 : ಕೌಟುಂಬಿಕ ಕಲಹದಿಂದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹಾಗಲಹಳ್ಳಿಯಲ್ಲಿ ನಡೆದಿದೆ.
ಸವಿತಾ (29) ಹಾಗೂ ತರುಣ್ (9), ತೇಜಶ್ರೀ (7) ಮೃತಪಟ್ಟ ತಾಯಿ ಮಕ್ಕಳು. ಮದ್ದೂರು ತಾಲೂಕಿನ ಮರಕಾರದೊಡ್ಡಿ ಗ್ರಾಮದ ಸವಿತಾಳನ್ನು ಕೆ. ಹಾಗಲಹಳ್ಳಿ ಗ್ರಾಮದ ಸುಂದರ್ ಎಂಬವರ ಜೊತೆ ಕಳೆದ 10 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ದಿನದಿಂದಲೂ ಇಬ್ಬರು ಖುಷಿಯಾಗಿದ್ದರು. ಆದರೆ ಕಳೆದ ಒಂದು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಮನಸ್ಥಾಪ ಇತ್ತು. ರಾತ್ರಿ ಇದ್ದಕ್ಕಿದ್ದ ಹಾಗೇ ಸವಿತಾ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.