ಬೆಳಗಾವಿ, ಡಿ. 19 : ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಜನರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸಿದೆ.ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲವೂ ಮುಗಿತು ನ್ಯಾಯಾಧೀಕರಣ ತೀರ್ಪು ಸಹ ಬಂತು.
ಇನ್ನೇನು ಕಾಮಗಾರಿ ಆರಂಭವಾಗಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆ ಜನರಿಗೆ ಅನಕೂಲ ಆಗಲಿದೆ ಎಂದೇ ರೈತರು ನೀರಿಕ್ಷಿಸಿದ್ದರು. ಆದರೇ ಸದ್ಯ ಯೋಜನೆ ಪೂರ್ಣಗೊಳಿಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಬೇಕಿದೆ. ಈ ಮೊದಲು ಅನುಮತಿ ನೀಡಿದ್ದ ಕೇಂದ್ರ ಅರಣ್ಯ ಇಲಾಖೆ ಸದ್ಯ ಅನುಮತಿಯನ್ನು ಅಮಾನತ್ತಿನಲ್ಲಿ ಇಟ್ಟು ಆದೇಶ ಹೊರಡಿಸಿದೆ. ಈ ಆದೇಶ ಉತ್ತರ ಕರ್ನಾಟಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.