ಸೈಕಲ್ ಪರಿವರ್ತನಾ ಯಾತ್ರಾ

ಸೈಕಲ್ ಪರಿವರ್ತನಾ ಯಾತ್ರಾ

ಬೆಂಗಳೂರು, ಡಿ. 19: ಮಹಾತ್ಮ ಗಾಂಧಿಜಿಯವರ 15೦ನೇ ವರ್ಷಾಚರಣೆ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆಯನ್ನ ಕೈಗೊಳ್ಳಲಾಗಿದೆ ಎಂದು  ಕಾರ್ಯಕ್ರಮದ ಸಂಚಾಲಕ ಡಾ.ಸಾನಂದ ಕುಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅ. 2ರಿಂದಲೆ ಸೈಕಲ್ ಯಾತ್ರೆ ಆರಂಭವಾಗಿದೆ ಯಾತ್ರಾದಲ್ಲಿ ಒಟ್ಟು 12 ಜನ ಯುವಕರಿದ್ದು,  ಈಗ ಕರ್ನಾಟಕವನ್ನ ಪ್ರವೇಶಿಸಿ ರಾಜ್ಯದಲ್ಲಿನ  ಶಾಲಾ-ಕಾಲೇಜುಗಳಿಗೆ ಬೇಟಿ ನೀಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದರು.

ಪರಿಸರ ಸಂರಕ್ಷಣೆ ಶೊಮುಸೌಹರ್ದ ಸೇರಿದಂತೆ ಮುಂತಾದ  ವಿಚಾರಗಳ ಬಗ್ಗೆ ಕನ್ಯಾಕುಮಾರಿಯವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸಲಾಗುವುದು ಈ ಯಾತ್ರೆಯು ಜ .3೦ ರಂದು   ಕನ್ಯಾಕುಮಾರಿಗೆ ತಲುಪಿ ಅಲ್ಲಿನ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಯಾತ್ರವನ್ನು  ಅಂತ್ಯಗೊಳಿಸುವುದಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos