ಕೇರಳ, ಡಿ. 19 : ಜಗತ್ತಿನಲ್ಲಿ ವೈಚಿತ್ರ್ಯಗಳಿಗೇನು ಬರವಿಲ್ಲ. ಆಗಾಗ ಸಂಭವಿಸುತ್ತಲೇ ಇರುತ್ತವೆ. 90ರ ಅಜ್ಜಿ ಮಕ್ಕಳಿಗೆ ಜನ್ಮ ನೀಡಿರುವುದು, ದೇಶದಲ್ಲಿ ವಿಚಿತ್ರ ಘಟನೆಗಳಿಗೆ ಬರವಿಲ್ಲದಂತೆಯಾಗಿದೆ.
ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ. ಎಂಬಂತೆ 60 ವರ್ಷ ಪ್ರಾಯದ ಜೋಡಿಗಳಿಗೆ ನವೋಲ್ಲಾಸ, ಮುಖದಲ್ಲಿ ಮಂದಹಾಸ, ಕಣ್ಣಂಚಿನಲ್ಲಿ ಜಿನುಗುವ ಸಂತಸ. ಕೇರಳ ತ್ರಿಶೂರ್ನ ಲಕ್ಮೀ ಅಮ್ಮಾಳ್ 21 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಆದರೆ ಅವರ ಪತಿ ಸಾಯುವುದಕ್ಕೂ ಮುಂಚೆ ಅವರ ಅಡುಗೆ ಸಹಾಯಕ ಕೋಚಿಯಾನ್ ಅವರಿಗೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರು.
ಲಕ್ಷ್ಮೀ ಅಮ್ಮಾಳ್ ತಮ್ಮ ಪತಿಯನ್ನು ಕಳೆದುಕೊಂಡ ನಂತರ ಅವರನ್ನು ಕೋಚಿಯಾನ್ ನೋಡಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವಿನ ಕಾಳಜಿ ಪ್ರೀತಿಯಾಗಿ ಮಾರ್ಪಟ್ಟಿದೆ. ಇದೀಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇವರಿಬ್ಬರು ವಾಸವಿರುವ ವೃದ್ಧಾಶ್ರಮವೇ ಇವರಿಬ್ಬರ ಮದುವೆಗೆ ವೇದಿಕೆ ಕಲ್ಪಿಸಿಕೊಡಲಿದೆ. ಡಿ.30ಕ್ಕೆ 60ರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.