ಬೆಂಗಳೂರು: ರಾಜ್ಯ ಬಿಜೆಪಿ 3 ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಫೆ.10ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಇದಾದ ಬಳಿಕ ಫೆ.18ಕ್ಕೆ ಮತ್ತೊಂದು ಬೃಹತ್ ಸಮಾವೇಶ ಮಾಡುತ್ತೇವೆ. ನಂತರ ಫೆಬ್ರವರಿಯಲ್ಲೇ ಮತ್ತೊಂದು ಸಮಾವೇಶ ಮಾಡುತ್ತೇವೆ. ಫೆ.14 ಹಾಗೂ 21 ರಂದು
ಅಮಿತ್ ಶಾ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ. ಒಟ್ಟಿನಲ್ಲಿ ಏ.15ರವರೆಗೆ ಸಂಪೂರ್ಣ ಸಮಯ ಕೊಟ್ಟು ಲೋಕಸಭಾ ಚುನಾವಣೆ ಗೆಲ್ಲಲು ಶ್ರಮಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಫೆ.28ರಂದು “ಮೇರಾ ಬೂತ್ -ಸಬ್ ಸೆ ಮಜುಬೂತ್” ಕಾರ್ಯಕ್ರಮ, ಫೆ.26ರಂದು ಪ್ರತಿಯೊಬ್ಬರ ಮನೆಯಲ್ಲಿ “ಕಮಲ ಜ್ಯೋತಿ” ಬೆಳಗಿಸುವ ಕಾರ್ಯಕ್ರಮ ಹಾಗೂ ಮಾ.2 ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ “ಕಮಲ ಸಂಕಲ್ಪ”
ನಡೆಸಲಿದ್ದೇವೆ ಎಂದರು.