ಬೆಂಗಳೂರು, ಡಿ. 14 : ಚಿನ್ನ ಅಂದ್ರೆ ಸಾಕು ಹೆಂಗಳೆಯರ ಕಿವಿ ನೆಟ್ಟಗಾಗುತ್ತೆ. ಅದರಲ್ಲೂ ಎಲ್ಲಾ ವಿಧದ ಜ್ಯೂವೆಲ್ಲರೀಸ್ ಒಂದೇ ಕಡೆ ಸಿಗುತ್ತೆ ಅಂದರೇ ಕೇಳ್ಬೇಕಾ..? ಹೆಣ್ಮಕ್ಕಳು ಫುಲ್ ಖುಶ್ ಆಗೋಗ್ತಾರೆ. ಸಿಲಿಕಾಟಿಯ ಬ್ಯೂಟಿಫುಲ್ ಲೇಡಿಸ್ಗೆ ಅಂತಾನೇ ಆಭರಣ ಮೇಳವನ್ನ ಆಯೋಜಿಸಲಾಗಿದೆ.
ಫಳ ಫಳ ಅಂತಿರೋ ಡೈಮೆಂಡ್ ನೆಕ್ಲೇಸ್. ಮಿರ ಮಿರ ಮಿಂಚ್ತಿರೋ ಅಂಟಿಕ್ ಜ್ಯುವೆಲ್ಲರೀಸ್. ವೆಸ್ಟರ್ನ್ ಔಟ್ಫಿಟ್ಗೆ ಮ್ಯಾಚ್ ಆಗೋ ಜೆಮ್ ಸ್ಟೋನ್ ಇಯರಿಂಗ್ಸ್. ಅಂದಹಾಗೆ ಈ ಆಭರಣಗಳ ಲೋಕ ಅನಾವರಣಗೊಂಡಿದ್ದು ಸಹಕಾರ ನಗರದಲ್ಲಿರೋ ರಾಧಾ ಕೃಷ್ಣ ಕನ್ವೆಷನ್ ಹಾಲ್ನಲ್ಲಿ.
ಮಹಿಳೆಯರಿಗೆ ಅಂತಾನೇ ಏರ್ಪಡಿಸಲಾಗಿದ್ದ ಆಭರಣಮೇಳದಲ್ಲಿ ಎಲ್ಲಾ ಬಗೆಯ ಜ್ಯುವೆಲ್ಲರಿಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ನಟಿ ಕಾವ್ಯಾ ಗೌಡ. ಆಭರಣ ಮೇಳದ ರಿಬ್ಬನ್ ಕಟ್ ಮಾಡಿದರು.
ಅದರಲ್ಲೂ ಟ್ರೆಂಡಿ. ಟೆಂಪಲ್ ಜ್ಯೂವೆಲರಿ , ಜೇಮ್ ಸ್ಟೋನ್ ಜ್ಯುವೆಲರಿ , ಕುಂದನ್, ಅಂಟಿಕ್, ಅನ್ ಕಟ್ ಸ್ಟೋನ್ ಸೆಟ್ ಮತ್ತು ಪರ್ಲ್ಸ್ ಜ್ಯುವೆಲರಿಗಳು ಮಾಲಿನಿಯರ ಕಣ್ಮನ ಸೆಳೆದ್ವು.
ಇನ್ನು ಎರಡು ದಿನಗಳ ಕಾಲ ಈ ಜ್ಯುವೆಲ್ಲರಿಯ ಎಕ್ಸಿಬಿಷನ್ ಬೆಳಗ್ಗೆ 10ರಿಂದ 7ವರೆಗೆ ನಡೆಯಲಿದೆ. ನೀವು ಕೂಡ ತಡ ಮಾಡದೆ ವೀಕೆಂಡ್ನಲ್ಲಿ ಬಿಡುವು ಮಾಡಿಕೊಂಡು ಇಲ್ಲಿಗೆ ಒಮ್ಮೆ ವಿಸಿಟ್ ಕೊಡಿ.