ಬೆಳಗಾವಿ, ಡಿ. 13 : ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿದ್ದಿ ಬುದ್ಧಿ ಹೇಳುವುದು ಶಿಕ್ಷಕರ ಕರ್ತವ್ಯ.ಶಿಕ್ಷಕಿ ಮಕ್ಕಳ ಮೇಲೆ ಅಮಾನವೀಯ ರೀತಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅರ್ಚನಾ ಸಾಗರ ವಿಜ್ಞಾನ ಶಿಕ್ಷಕಿ. ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಯಲ್ಲಿ ಪಾಠ ಮಾಡದೇ ಮನ ಬಂದಂತೆ ಕಟ್ಟಿಗೆಯಿಂದ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಮಕ್ಕಳ ಮೇಲೆ ರಾಕ್ಷಿಸಿ ವರ್ತನೆ ಪ್ರದರ್ಶಿಸಿದ ವಿಜ್ಞಾನ ಶಿಕ್ಷಕಿ. ಪ್ರೌಢ ಶಾಲೆಯಲ್ಲಿ ಒಟ್ಟು 230 ವಿದ್ಯಾರ್ಥಿಗಳು ಓದುತ್ತಿದ್ದು, ಅರ್ಚನಾ ಶಾಲೆಗೆ ನೇಮಕವಾಗಿ ಬಂದಾಗಿನಿಂದ ಇದೇ ರೀತಿ ದರ್ಪ ಮೆರೆಯುತ್ತಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ ಸರಿಯಾಗಿ ಪಾಠ ಮಾಡದೆ ಮೊಬೈಲ್ ಫೋನ್ನಲ್ಲಿ ಕಾಲಹರಣ ಮಾಡುತ್ತಾರೆ. ಪಾಠ ಮಾಡದೆ ಉತ್ತರ ಹೇಳಿ ಎಂದು ಗದರಿಸುವುದು ಹೊಡೆಯುವುದು ಮಾಡುತ್ತಾರೆ ಎಂದು ಶಾಲಾ ಮಕ್ಕಳ ಆರೋಪಿಸಿದ್ದಾರೆ.