ಬೆಂಗಳೂರು: ಸಂವಿಧಾನ
ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿ ಕದಡುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮೇಲೆ ಪ್ರಕರಣ
ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಿಳೆಯರು ಹಾಗೂ ಹಲವು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಂದು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ
ಭಾರೀ ಸಂಖ್ಯೆಯಲ್ಲಿ ನೆರೆದ ವಿವಿಧ ಮಹಿಳಾ ಸಂಘಗಳು, ಸಂಸ್ಥೆಗಳ, ಸ್ತ್ರೀ ಶಕ್ತಿ ಗುಂಪುಗಳ
ಸದಸ್ಯರು ಕೂಡಲೇ ಸಚಿವ ಅನಂತ ಕುಮಾರ ಹೆಗಡೆ
ರಾಜೀನಾಮೆ ನೀಡಬೇಕು ಎಂದು ಆಗ್ರಸಿದರು.
ಅನಂತ ಕುಮಾರ ಹೆಗಡೆ ಕೇಂದ್ರ ಸರ್ಕಾರದ ಸಚಿವರಾದಾಗಿನಿಂದ ಸಮಾಜ ಕದಡುವ, ಶಾಂತಿ
ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಹಾಗೂ ಸಂವಿಧಾನ ವಿರೋಧಿ, ಮಹಿಳಾ ವಿರೋಧಿ ಹೇಳಿಕೆಗಳನ್ನು
ನೀಡುತ್ತಾ ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಹೇಳಿಕೆಗಳಿಂದ ಎಲ್ಲಾ ಸಮಾಜದಾಯದವರು
ನಿರ್ಭೀತಿಯಾಗಿ ವಾಸಿಸುವುದೇ ಕಷ್ಟವಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕೂಡಲೇ ಹೆಗಡೆ ಅವರು ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬೇಷರತ್ ಕ್ಷಮೆಯಾಚಿಸಬೇಕು. ಬಾಲಿಷ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮು ವಿಷಬೀಜ ಬಿತ್ತಿ ಸಮಾಜದ ಸಾಮರಸ್ಯವನ್ನು ಹಾಳುಗೆಡುವುತ್ತಿರುವ ಅನಂತ ಕುಮಾರನನ್ನು ಮೇಲೆ ಪೊಲೀಸರು ಮೊಕದ್ದಮೆ ದಾಕಲಿಸಬೇಕು. ಕೇಂದ್ರ ಹಾಗೂ ರಾಜ್ಯ ಮಹಿಳಾ ಆಯೋಗಗಳು ಹೆಗಡೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

