ಉಗ್ರನನ್ನು ಹೊಡೆದುರುಳಿಸಿದ ಪೊಲೀಸರು..!

ಉಗ್ರನನ್ನು ಹೊಡೆದುರುಳಿಸಿದ ಪೊಲೀಸರು..!

ಲಂಡನ್ , ನ. 30 : ಮತ್ತೆ ಉಗ್ರರು ದಾಳಿ ನಡೆಸಿದ್ದು, ಶಸ್ತ್ರಧಾರಿ ಉಗ್ರನೋರ್ವ ಮನಸೋ ಇಚ್ಛೆ ಚಾಕು ಇರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಲಂಡನ್ ಬ್ರಿಡ್ಜ್ ಮೇಲೆ ಪಾದಾಚಾರಿಗಳನ್ನು ಗುರಿಯಾಗಿಸಿಕೊಂಡು ಉಗ್ರ ದಾಳಿ ನಡೆಸಿದ್ದು, ದಾಳಿಯಲ್ಲಿ ಸ್ಥಳದಲ್ಲೇ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಶಸ್ತ್ರಧಾರಿ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ ಆತ ಆತ್ಮಹುತಿ ಬಾಂಬ್ ಅನ್ನು ಕಟ್ಟಿಕೊಂಡು ಆತ್ಮಾಹುತಿ ದಾಳಿಗೂ ಸಿದ್ಧನಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos