ನವದೆಹಲಿ, ನ. 29 : ಇತ್ತೀಚೆಗೆ ಅಯೋಧ್ಯೆ ಭೂವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಪಟ್ಟಂತೆ ಪಾಕಿಸ್ತಾನ ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ಭಾರತ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ ತಮ್ಮ ದೇಶದ ನಾಗರಿಕರೇ ಪ್ರಜಾಪ್ರಭುತ್ವದ ನಿಜವಾದ ಹಕ್ಕುಗಳನ್ನು ಅನುಭವಿಸದ ದೇಶದಿಂದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಬೇರೆ ದೇಶಗಳು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ, ಅಲ್ಪಸಂಖ್ಯಾತರ ವೇದಿಕೆಯ 12ನೇ ಅಧಿವೇಶನದಲ್ಲಿ ಪಾಕಿಸ್ತಾನ ಅಯೋಧ್ಯೆ ತೀರ್ಪಿನ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಭಾರತದ ರಾಯಭಾರಿ ವಿಮರ್ಶ ಆರ್ಯನ್, ಪಾಕಿಸ್ತಾನದ ಧಾರ್ಮಿಕ, ಜನಾಂಗೀಯ, ಪಂಥೀಯ ಮತ್ತು ಭಾಷಾ ಅಲ್ಪಸಂಖ್ಯಾತರು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅನುಭವಿಸುತ್ತಿದ್ದಾರೆ, ಹೀಗಾಗಿ ಅವರ ಉದ್ಧಾರಕ್ಕೆ ಪಾಕಿಸ್ತಾನ ನೋಡಿಕೊಳ್ಳಲಿ ಎಂದಿದ್ದಾರೆ.