ಇಲ್ಲಿ ಬೀದಿ ನಾಯಿಗಳದ್ದೇ ಹವಾ

ಇಲ್ಲಿ ಬೀದಿ ನಾಯಿಗಳದ್ದೇ ಹವಾ

ಬಾಗೇಪಲ್ಲಿ, ನ. 29: ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೀದಿಗಳಲ್ಲಿ ನಾಯಿಗಳ  ಹಾವಳಿ ಜಾಸ್ತಿಯಾಗಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಮಕ್ಕಳು, ಮಹಿಳೆಯರಿಗೆ ಮನೆ ಬಿಟ್ಟು ಕೆಲಸ ಕಾರ್ಯಗಳಿಗೆ ರಸ್ತೆಗೆ ಬಂದರೆ  ಬೀದಿಯಲ್ಲಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕಾಗದ ಸಂದರ್ಭ ಬಂದಿದೆ.

ಬಸ್ ನಿಲ್ದಾಣದ ಮುಂದೆ ನಾಯಿಗಳು ಗುಂಪು ಗುಂಪಾಗಿ  ಬಂದು ಸಿಕ್ಕ ಸಿಕ್ಕ ಸಾರ್ವಜನಿಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈ ಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಲಾದರೋ ಸ್ಥಳೀಯ ಪುರಸಭೆ ಎಚ್ಚೆತ್ತುಕೊಂಡು ನಾಯಿಗಳ ಸಂತತಿಗೆ ಬ್ರೇಕ್‌ ಹಾಕಲು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos