ಮುಂಬೈ, ನ. 27 : ಭಾರತ ತಂಡದ ಅನುಭವಿ ವಿಕೆಟ್ಕೀಪರ್ ವೃದ್ಧಿ ಮಾನ್ ಸಹಾ, ಬಲಗೈ ಬೆರಳಿನ ಮೂಳೆ ಮುರಿತ ಸಲುವಾಗಿ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಕಳೆದ ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಡೇ- ನೈಟ್ ಟೆಸ್ಟ್ ಪಂದ್ಯದಲ್ಲಿ ಸಹಾ ಈ ಗಾಯದ ಸಮಸ್ಯೆ ಎದುರಿಸಿದ್ದರು.
ಫ್ಲೈಯಿಂಗ್ ಸಹಾ ಖ್ಯಾತಿಯ 35 ವರ್ಷದ ಅನುಭವಿ ವಿಕೆಟ್ಕೀಪರ್ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರವೇ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಸಹಾ ಬುಧವಾರ ಮುಂಬೈನ ಖಾಸಗಿ ಆಸ್ಪತ್ರೆ ಒಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.