ರಮೇಶ್ ನನ್ನು ಸೋಲಿಸುವುದೇ ಅಜೆಂಡಾ!

ರಮೇಶ್ ನನ್ನು ಸೋಲಿಸುವುದೇ ಅಜೆಂಡಾ!

ಬೆಳಗಾವಿ, ನ. 25 : ರಮೇಶ್ ಸೋಲಿಸಲು ಎಚ್ ಡಿಕೆ ಪಣ ತೊಟ್ಟಿದ್ದಾರೆ, ಇದೊಂದು ತ್ರಿಕೋನ ಸ್ಪರ್ಧೆಯಾಗಿದ್ದು, ರಮೇಶ್ ಸೋಲಿಸುವುದೇ ಕಾಂಗ್ರೆಸ್-ಜೆಡಿಎಸ್ ಅಜೆಂಡಾವಾಗಿದೆ.
ಡಿ.5 ರಂದು ನಡೆಯುವ ಉಪ ಚುನಾವಣೆ ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ರಮೇಶ್, ಭಿಂಶಿ ಮತ್ತು ಬಾಲಚಂದ್ರ ಜಾರಕಿ ಹೊಳಿ ರಾಜಕೀಯ ಬದ್ಧ ವೈರಿಗಳಾದ ಸತೀಶ್ ಮತ್ತು ಲಖನ್ ಜಾರಕಿಹೊಳಿ ವಿರುದ್ದ ಪ್ರಚಾರಕ್ಕಿಳಿದಿದ್ದಾರೆ.
ಗೋಕಾಕ್ ನಲ್ಲಿ ಕಳೆದ ಮೂರು ದಶಕಗಳಿಂದ ರಾಜಕೀಯ ಪಾರುಪತ್ಯ ಸ್ಥಾಪಿಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಅವರ ಕಿರಿಯ ಸಹೋದರ ತೊಡೆ ತಟ್ಟಿ ನಿಂತಿದ್ದಾರೆ. ರಮೇಶ್ ಜೊತೆಗಿನ ಎಲ್ಲಾ ಬಂಧಗಳನ್ನು ಕಡಿದುಕೊಂಡು, ತಮ್ಮ ಅಣ್ಣನ ವಿರುಪದ್ಧವೇ ಕಣಕ್ಕಿಳಿದಿದ್ದಾರೆ. ಲಖನ್ ಗೆ ಸತೀಶ್ ಜಾರಕಿಹೊಳಿ ಬೆಂಬಲ ನೀಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos