ಬೆಂಗಳೂರು, ನ. 25 : ನೈಜೆರಿಯಾ ಮತ್ತು ಆಫ್ರಿಕಾದಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಮಸಾಜ್ ಪಾರ್ಲರ್ ಹಾಗೂ ಇನ್ನಿತರ ಕಡೆ ಕೆಲಸ ಮಾಡಿಕೊಂಡಿರುವ ವಿದೇಶಿಗರು ಭಾರತೀಯ ಯುವತಿರನ್ನು ಟಾರ್ಗೆಟ್ ಮಾಡಿ ಅವರ ಜತೆ ಲಿವಿಂಗ್ ಟುಗೆದರ್ನಲ್ಲಿ ನೆಲೆಸಲು ಶುರು ಮಾಡಿದ್ದಾರೆ.
ಮಾದಕವಸ್ತು ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸುತ್ತಿದ್ದಂತೆಯೇ ನೈಜೆರಿಯಾ ಮತ್ತು ಆಫ್ರಿಕಾ ಸೇರಿದಂತೆ ಇನ್ನಿತರೆ ದೇಶಗಳಿಂದ ಬಂದು ನಗರದಲ್ಲಿ ನೆಲೆಯೂರಿರುವ ಡ್ರಗ್ ಪೆಡ್ಲರ್ಗಳು ರಂಗೋಲಿ ಕೆಳಗೆ ನುಸುಳಲು ಆರಂಭಿಸಿದ್ದಾರೆ.
ಲಿವಿಂಗ್ : ವಿಮಾನ ಮತ್ತು ಸಮುದ್ರ ಮಾರ್ಗದಲ್ಲಿ ಬಂದರು ಪ್ರದೇಶಗಳಿಗೆ ಬಂದಿಳಿಯುವ ನೂರಾರು ಟನ್ ಮಾದಕ ವಸ್ತುಗಳು ನಂತರ ರೈಲು ಮತ್ತು ರಸ್ತೆ ಮಾರ್ಗದಲ್ಲಿಬೆಂಗಳೂರು ಸೇರಿದಂತೆ ನಾನಾ ನಗರಗಳನ್ನು ತಲುಪುತ್ತಿವೆ. ಹೀಗಾಗಿ, ನಾನಾ ತನಿಖಾ ಸಂಸ್ಥೆಗಳು ರೈಲು ನಿಲ್ದಾಣ ಸೇರಿದಂತೆ ನಗರ ಪ್ರವೇಶಿಸುವ ಚೆಕ್ ಪೋಸ್ಟ್ಗಳಲ್ಲಿತೀವ್ರ ನಿಗಾ ಇಟ್ಟಿದ್ದಾರೆ.