ಬೆಂಗಳೂರು,ನ. 24 : ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಅಗಲಿ ಇಂದಿಗೆ (ನ.24ಕ್ಕೆ) ಒಂದು ವರ್ಷ ತುಂಬಿದೆ. ಇಂದಿಗೂ ಕೂಡ ಹಲವರು ಅವರನ್ನು ಸದಾ ನೆನಪಿಸಿಕೊಳ್ಳುತ್ತಲೇ ಇದ್ದಾರೆ.
ವರ್ಷದಲ್ಲಿ ಏನೆಲ್ಲ ಬದಲಾವಣೆ ಆಯ್ತು ಅಲ್ವಾ! ಸುಮಲತಾ ಅಂಬರೀಶ್ ಮಂಡ್ಯದ ಸಂಸದೆಯಾದರು, ಅಭಿಷೇಕ್ ಅವರ ‘ಅಮರ್’ ಸಿನಿಮಾ ತೆರೆಕಂಡು ಎರಡನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಪಂಚಾಂಗದ ಪ್ರಕಾರ ನವೆಂಬರ್ 14ರಂದು ಅಂದರೆ 10 ದಿನ ಮುಂಚೆಯೇ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿ ಕಾರ್ಯ ನೆರವೇರಸಿಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದ ವೃಕ್ಷ ಹಾಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯಾತಿಗಣ್ಯರು ಆಗಮಿಸಿದ್ದರು.
ಮಳವಳ್ಳಿ ಹುಚ್ಚೇಗೌಡ ಅವರ ಮಗ ಅಮರ್ನಾಥ್ ತೆರೆ ಮೇಲೆ ಮಿಂಚಿದ್ದು ಅಂಬರೀಶ್ ಆಗಿ. ‘ನಾಗರಹಾವು’ ಸಿನಿಮಾ ಮೂಲಕ ನೆಗೆಟಿವ್ ಶೇಡ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಂಬಿ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ವಿಷ್ಣುವರ್ಧನ್, ಡಾ.ರಾಜ್ಕುಮಾರ್ ಜೊತೆ ಅಭಿನಯಿಸಿದ ಖ್ಯಾತಿ ಇವರದ್ದಾಗಿದೆ. ಇವರನ್ನು ಜನರು ಪ್ರೀತಿಯಿಂದ ‘ಮಂಡ್ಯದ ಗಂಡು’ ಎಂದು ಪ್ರೀತಿಯಿಂದ ಕರೆಯುತ್ತಾರೆ.