ಇನ್ನೂ ಕಾಮಗಾರಿ ಪೂರ್ಣಗೊಳಿಸಿ

ಇನ್ನೂ ಕಾಮಗಾರಿ ಪೂರ್ಣಗೊಳಿಸಿ

ಬೆಂಗಳೂರು, ನ. 24 : ನಾಲ್ಕೇ ದಿನದಲ್ಲಿ ನಾಲ್ಕು ಕಿಲೋಮೀಟರ್ ರಸ್ತೆ ದುರಸ್ತಿ ಮಾಡಿರುವುದಾಗಿ ಬೃಹತ್ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಸಾಧನೆಯನ್ನು ಹೇಳಿಕೊಂಡಿದೆ. ಎಚ್ಎಸ್ಆರ್ ಲೇಔಟ್ ಮತ್ತು ಸೇಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಪೂರ್ಣ ಹಾಳಾಗಿದ್ದ ನಾಲ್ಕು ಕಿಲೋಮೀಟರ್ ಉದ್ದದ ರಸ್ತೆಯನ್ನು ತ್ವರಿತವಾಗಿ ದುರಸ್ತಿ ಮಾಡಲಾಗಿದ್ದು, ನಾಲ್ಕು ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಬಿಬಿಎಂಪಿ ಶನಿವಾರ ಟ್ವೀಟ್ ಮಾಡಿದೆ.

ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಈ ಕುರಿತು ಫೋಟೋ ಸಮೇತ ಟ್ವೀಟ್ ಮಾಡಿದ್ದು, ಈ ಟ್ವೀಟ್ಗೆ ಪ್ರಶಂಸೆ ಹಾಗೂ ಟೀಕೆಗಳೆರಡೂ ವ್ಯಕ್ತವಾಗಿವೆ. ಬೆಂಗಳೂರಿನ ಬಹುಪಾಲು ರಸ್ತೆಗಳು ಹಾಳಾಗಿದ್ದು, ಇದೇ ಮಾದರಿಯಲ್ಲಿ ತ್ವರಿತವಾಗಿ ದುರಸ್ತಿ ಮಾಡುವಂತೆ ಹಲವಾರು ಬೆಂಗಳೂರಿಗರು ಕೋರಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos