ಹಿರೇಕೆರೂರು, ನ. 18: ಮಾಜಿ ಸಿಎಂ ಕುಮಾರಸ್ವಾಮಿ ಅನರ್ಹ ಶಾಸಕರನ್ನು ಸೋಲಿಸುವುದಾಗಿ ಹೇಳಿದ್ದಾರೆ. ನಮ್ಮನ್ನು ಸೋಲಿಸುವುದು ಗೆಲ್ಲಿಸುವುದು ಜನರೇ ಹೊರತು ಕುಮಾರಸ್ವಾಮಿಯಲ್ಲ. ಸಿಎಂ ಆಗಿ ಕೇವಲ ಅವರ ಕುಟುಂಬ ಹಾಗೂ ಎಂಟು ಕ್ಷೇತ್ರಕ್ಕೆ ಸೀಮಿತವಾಗಿದ್ದ ಹೆಚ್ಡಿಕೆ, ನಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ ಪರಿಣಾಮ ಸಿಎಂ ಸ್ಥಾನ ಕಳೆದುಕೊಂಡರು. ನಮ್ಮ ಕ್ಷೇತ್ರದ ಜನ ನಾನು ಬಿಜೆಪಿ ಸೇರ್ಪಡೆಯಾಗಿದ್ದನ್ನು ಸ್ವಾಗತಿಸಿದ್ದಾರೆ. ಬಿಜೆಪಿ ನಾಯಕ ಬಣಕಾರ್ ಸಹ ನನ್ನ ಜತೆ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಜನ ಈ ಬಾರಿ ಹೆಚ್ಚಿನ ಮತ ನೀಡಿ ನನ್ನ ಆಯ್ಕೆ ಮಾಡಲಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.