ಚುನಾವಣೆಯಲ್ಲಿ ಗೆಲವು ನಮ್ದೆ : ವಿಶ್ವಾನಾಥ

ಚುನಾವಣೆಯಲ್ಲಿ ಗೆಲವು ನಮ್ದೆ : ವಿಶ್ವಾನಾಥ

ಮೈಸೂರು, ನ. 15 : ಯಾರೇ ಇರಲಿ ಗೆಲುವು ನಮ್ದೆಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾವಣೆ ಸಹಜ.

ಕ್ಷೇತ್ರದ ಮತದಾರರ ಒಲವು ನಮ್ಮ ಕಡೆ ಇದೆ. ಜಯ ಖಚಿತ ಎಂದು ಪುನರುಚ್ಚರಿಸಿದರು.
ಜೆಡಿಎಸ್-ಕಾಂಗ್ರೆಸ್ ನಾಯಕರ ಹುನ್ನಾರದಿಂದ ನಮ್ಮನ್ನು ತುಳಿಯುವ ಪ್ರಯತ್ನ ನಡೆದಿತ್ತು. ಆದರೆ ಅವರ ಆಟ ನಡೆಯಲಿಲ್ಲ. ಇದೀಗ ಸುಪ್ರೀಂಕೋರ್ಟ್ ರಣರಂಗದಲ್ಲಿ ಇಳಿಯುವುದಕ್ಕೆ ಅವಕಾಶ ನೀಡಿದೆ ಎಂದು ಮಾರ್ಮಿಕವಾಗಿ ನುಡಿದರು. ನಾವು ಅಧಿಕಾರಕ್ಕಾಗಿ ರಾಜೀನಾಮೆ ನೀಡಿಲ್ಲ. ಈ ವಿಷಯ ನಮ್ಮ ಕ್ಷೇತ್ರದ ಜನರಿಗೂ ಗೊತ್ತಿದೆ. ಹಾಗಾಗಿ ನಮ್ಮನ್ನು ಸ್ವೀಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ಫ್ರೆಶ್ ನ್ಯೂಸ್

Latest Posts

Featured Videos