ಬೆಂಗಳೂರು, ನ. 14: ನಗರದ ಹೃದಯ ಕೇಂದ್ರಗಳಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳ ಸಂಚಾರವನ್ನ ಆದಷ್ಟೂ ಕಡಿಮೆ ಮಾಡಿಮೆ ಮಾಡಿ ಟ್ರಾಫಿಕ್ ಕಂಟ್ರೋಲ್ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಸಾಧಿಸಲು ಸಾರಿಗೆ ಸಂಪರ್ಕ ಹಬ್ ಗಳ ನಿರ್ಮಾಣ ನಿರ್ಮಾಣ ಮಾಡುವ ಯೋಜನೆಗೆ ಮರು ಚಾಲನೆ ದೊರೆತಿದೆ.
ನಗರ ಭೂ ಸಾರಿಗೆ ನಿರ್ದೇನಾಲಯ ನಗರದ ವಿವಿದೆಡೆ ಎಂಟು ಹಬ್ ನಿರ್ಮಾಣ ಕಾಮಗಾರಿಗಳಿಗೆ ಬಿಡ್ ಆಹ್ವಾನಿಸಿದೆ.
ಕೆ.ಆರ್.ಪುರ, ಚೆಲ್ಲಾಘಟ್ಟ, ಬೈಯಪ್ಪನಹಳ್ಳಿ, ಬೊಮ್ಮಸಂದ್ರ, ಪೀಣ್ಯ, ಹಳೇ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ, ಹಾಗೂ ಕಾಡುಗೋಡಿ ಸೇರಿದಂತೆ 2 ಹಂತಗಳಲ್ಲಿ ಹಬ್ ನಿರ್ಮಾಣದ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ವಿನ್ಯಾಸ ರೂಪಿಸಲಾಗಿದೆ. 2020 ರ ಜನವರಿ ವೇಳೆಗೆ ಗುತ್ತಿಗೆ ನಿರ್ವಹಣಾ ಕಂಪನಿಯನ್ನು ನಿಗದಿಗೊಳಿಸಲಾಗುತ್ತದೆ. ವಿನ್ಯಾಸ ಕಾರ್ಯಕ್ಕೆ 4 ವರ್ಷ ಅವದಿ ನೀಡಲಾಗಿದೆ.
ದಟ್ಟಣೆ ನಿಯಂತ್ರಣ
ಸುಮಾರು ದಿನಂಪ್ರತಿ 70 ಲಕ್ಷ ವಾಹನಗಳು ಸಂಚರಿಸುತ್ತಿವೆ. ಬಿಎಂಟಿಸಿ, ಮೆಟ್ರೋ ಸಂಚಾರಿಸುತ್ತಿದ್ದರೂ ವಾಹನಗಳ ದಟ್ಟಣೆ ಮಾತ್ರ ನಿಯಂತ್ರಣ ಸಾಧಿಸಲು ಸಾದ್ಯವಾಗಿಲ್ಲ. 2030 ರವೇಳೆಗೆ ನಗರದ ಈಗಿನ ಜನಸಂಖ್ಯೆ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚುವರಿಯಾಗಿ ಬೆಳೆಯುತ್ತದೆ. ಜೊತೆಗೆ ವಾಹನಗಳು 3 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಸಾರಿಗೆ ವಾಹನಗಳು ದಿನವೊಂದಕ್ಕೆ 50 ಲಕ್ಷ ಟ್ರಿಪ್ ಸಂಚರಿಸುತ್ತವೆ. ಬಸ್ ನಿಲ್ದಾಣಗಳಿದ್ದರೂ ಕೇಂದ್ರ ಭಾಗಗಳಲ್ಲಿ ಸಂಚರಿಸುತ್ತಿವೆ. ಬಿಎಂಟಿಸಿ ಬಸ್ ಗಳಿಗೆ ಪರ್ಯಾಯ ಎನ್ನುವಂತಹ ಸಾರಿಗೆ ವ್ಯವಸ್ಥೆ ಸೃಷ್ಟಯಾಗಿದೆ. ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಕೇಂದ್ರ ಭಾಗಗಳಿಗೆ ಬಾರದಂತೆ ನಿಯಂತ್ರಿಸಿ ಹಬ್ ಗಳಿಗೆ ಸೀಮಿತಗೊಳಿಸುವ ಮೂಲಕ ನಗರ ಸಾರಿಗೆ ವ್ಯವಸ್ಥೆಗೆ ಪ್ರಯಾಣಿಕರನ್ನು ಹೊಂದಿಕೊಳ್ಳುವಂತೆ ಮಾಡುವುದೇ ಇದರ ಹಿಂದಿನ ಉದ್ದೇಶ ಹಾಗೂ ಬಿಎಂಟಿಸಿಯ ನಷ್ಟ ತಗ್ಗಿಸುವುದು ಕೂಡಾ ಇದರ ಉದ್ದೇಶವಾಗಿದೆ.
ಪರ್ಯಾಯ ವ್ಯವಸ್ಥೆ
ಮೆಟ್ರೋ ಹಾಗೂ ನಗರ ಸಾರಿಗೆ ಅಭಿವೃದ್ಧಿಗೊಂಡಿದೆ. ನಗರ ವ್ಯಾಪ್ತಿಯಲ್ಲಿ ರೈಲ್ವೆ ಕೂಡ ಸುಗಮ ಸಾರಿಗೆಯ ವ್ಯವಸ್ಥೆಗೆ ಒಪ್ಪಿಗೆ ನೀಡಿದೆ.
ನಗರದ ಹೊರ ಭಾಗಗಳಿಂದ ನಗರದೊಳಗೆ ಪ್ರವೇಶಿಸುವ ಪ್ರಯಾಣಿಕರು ಕೇಂದ್ರ ಭಾಗದಲ್ಲಿ ನಿರ್ಮಾಣ ಮಾಡುವ ಹಬ್ ಗಳಲ್ಲಿ ಇಳಿದು ನಗರ ಸಾರಿಗೆ ಮತ್ತು ಮೆಟ್ರೋ ಹಾಗೂ ನಗರ ರೈಲ್ವೆ ಮೂಲಕ ನಗರ ಪ್ರವೇಶಿಸಲು ಹಬ್ ವ್ಯವಸ್ಥೆ ಅನುಕೂಲವಾಗಲಿದೆ.
ಹಬ್ ಗಳಲ್ಲಿ ಏನಿರುತ್ತೆ?
*ವಿಶ್ರಾಂತಿ ಪಡೆಯಲು ಸುಸಜ್ಜಿತ ಕೊಠಡಿ ವ್ಯವಸ್ಥೆ.
*ಶೌಚಾಲಯ, ಸ್ನಾನದ ಕೊಠಡಿ.
*ಕೊಂಡೊಯ್ದ ಲಗೇಜುಗಳಿಗಳಿಗೆ ಸುರಕ್ಷಿತ ಲಗೇಜು ರೂಂ
* ಆಹಾರ ಮಳಿಗೆ ಜೊತೆಗೆ ಶಾಪಿಂಗ್ ಮಾಲ್ ಗಳು.
* ಸಾರ್ವಜನಿಕ ಮಾಹಿತಿ ಕೇಂದ್ರ
* ಖಾಸಗಿ ಬಸ್ ಗಳಿಗೆ ಪ್ರತ್ಯೇಕ ಬಸ್ ನಿಲ್ದಾಣ.
ಬಾಡಿಗೆ ಆಧಾರಿತ ಆಟೋ ರಿಕ್ಷ ಮತ್ತು ಟ್ಯಾಕ್ಸಿ ಸೇವೆ.
ನಗರದಲ್ಲಿ ವಿಪರೀತವಾಗಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಲು ಈ ವೇಳೆಗಾಗಲೇ ಹಬ್ ನಿರ್ಮಾಣ ಆಗಿರ ಬೇಕಿತ್ತು. ಆದರೆ, ತಡವಾಗಿಯಾದರೂ ಕಾರ್ಯ ರೂಪಕ್ಕೆ ಬರುತ್ತಿರುವುದು ಸ್ವಲ್ಪ ಮಟ್ಟಿನ ನಗರದ ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ ಎಂದು ಚಂದ್ರ ಚೂಡಾ ಬಿಎಂಟಿಸಿ ಚೆಕಿಂಗ್ ಇನ್ಸ್ ಪೆಕ್ಟರ್ ಪೀಣ್ಯ ವಿಭಾಗ ದವರು ತಿಳಿಸಿದರು.