ಸಿಡ್ನಿ,ನ. 10 : ಸ್ಪೋಟಕ ಆಟಗಾರ ಡೆವಿಡ್ ವಾರ್ನರ್ ಮಗಳ ಇಷ್ಟದ ಆಟಗಾರ ಯಾರು ಗೊತ್ತಾ? ಅದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಡೇವಿಡ್ ವಾರ್ನರ್ ಪತ್ನಿ ಕ್ಯಾಂಡೈಸ್ ವಾರ್ನರ್ ತಮ್ಮ ಟ್ವಿಟ್ಟರ್ ಖಾತೆಯಲ್ಲೊಂದು ವಿಡಿಯೋ ಹಾಕಿದ್ದು ಭಾರಿ ವೈರಲ್ ಆಗಿದೆ.
ಮಗಳು ಇವಿ ಮೇ ಕ್ರಿಕೆಟ್ ಆಡುತ್ತಾ ತುಂಬಾ ಮುದ್ದಾಗಿ ಐ ಯಾಮ್ ವಿರಾಟ್ ಕೊಹ್ಲಿ ( ನಾನು ವಿರಾಟ್ ಕೊಹ್ಲಿ) ಎನ್ನುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಸಣ್ಣ ಹುಡುಗಿ ಭಾರತದಲ್ಲಿ ತುಂಬಾ ಸಮಯ ಕಳೆದಿದ್ದಾಳೆ. ಹಾಗಾಗಿ ವಿರಾಟ್ ಕೊಹ್ಲಿ ಆಗಬೇಕೆಂದು ಬಯಸುತ್ತಾಳೆ ಎಂದು ಮಿಸೆಸ್ ವಾರ್ನರ್ ಬರೆದುಕೊಂಡಿದ್ದಾರೆ.