ಉಪಾಹಾರ, ಊಟ ಮತ್ತು ಸಿಹಿತಿನಿಸುಗಳಂತಹ ಆಹಾರ ಪದಾರ್ಥಗಳನ್ನು ತಯಾರಿಸುವುದರಿಂದ
ಮೊಟ್ಟೆ ಅಡುಗೆ ಮನೆ ಪ್ರವೇಶ ಮಾಡಿದ್ದು. ಮೊಟ್ಟೆಯನ್ನು ಬೇಯಿಸಿ, ಫ್ರೈ, ಬುರ್ಜಿ ಹೀಗೆ ಅನೇಕಾನೇಕ
ಆಹಾರ ಪದಾರ್ಥಗಳನ್ನು ಮಾಡುವುದು ರೂಢಿ. ಆದರೆ ಮೊಟ್ಟೆ ಸೇವಿಸುವುದರ ಜೊತೆಗೆ ಆರೋಗ್ಯದ ಪ್ರಯೋಜನ ಏನು
ಅನ್ನೋದನ್ನ ತಿಳಿದುಕೊಳ್ಳೋಣ.
ಉತ್ತಮ ಗುಣಮಟ್ಟದ ಪ್ರೋಟೀನ್: ಫಿಟ್ನೆಸ್ ಉತ್ಸಾಹಿಗಳು ಯಾವಾಗಲೂ ಮೊಟ್ಟೆ ಸೇವಿಸಲು ಕಾರಣ-ಪ್ರೋಟೀನ್. ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್ ಹೊಂದಿರುವುದರಿಂದ ಸ್ನಾಯುಗಳ ದುರಸ್ತಿಯಾಗದಂತೆ, ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು, ದೇಹಕ್ಕೆ ಶಕ್ತಿಯನ್ನು ಒದಗಿಸಿ ತೂಕ ನಷ್ಟದಲ್ಲಿ ಸಹಾಯ ಮಾಡುತ್ತದೆ.

ಎಲುಬುಗಳಿಗೆ ಒಳ್ಳೆಯದು: ಮೊಟ್ಟೆ ವಿಟಮಿನ್ ‘ಡಿ’ ಅಂಶವನ್ನು ಹೊಂದಿದೆ. ಇದು ಬಲವಾದ ಮೂಳೆಗಳಿಗೆ ಅವಶ್ಯಕವಾಗಿದ್ದು, ಮೂಳೆ ಮತ್ತು ಹಲ್ಲುಗಳನ್ನು ಸದೃಢವಾಗಿಡಲು ಸಹಾಯಮಾಡುತ್ತದೆ.
ನೆನಪಿನ ಶಕ್ತಿ ಹೆಚ್ಚಿಸಲು ಉಪಯುಕ್ತ: ಮಾಹಿತಿಯನ್ನು ಕೇಂದ್ರೀಕರಿಸುವ ಶಕ್ತಿ ಅಥವಾ ಅದನ್ನು ಉಳಿಸಿಕೊಳ್ಳುವಲ್ಲಿ ಸಮಯ ತೆಗೆದುಕೊಳ್ಳುತ್ತಿದ್ದರೆ ಅದಕ್ಕೆ ಮೊಟ್ಟೆಯಲ್ಲಿನ ವಿಟಮಿನ್ ‘ಬಿ’ ಅಂಶ ಅತ್ಯುತ್ತಮವಾಗಿದೆ. ಈ ಅಂಶ ಆರೋಗ್ಯಕರ ನರಮಂಡಲ ಹಾಗೂ ಮೆದುಳನ್ನು ಬೆಂಬಲಿಸುವಲ್ಲಿ ಸಹಕಾರಿ. ಜೊತೆಗೆ ಮೊಟ್ಟೆಗಳ ಪ್ರೊಟೀನ್ ಅಂಶವು ದಿನವಿಡೀ ಮಾನಸಿಕ ಪ್ರದರ್ಶನವನ್ನು ಸುಧಾರಿಸುತ್ತದೆ.

ಕಡಿಮೆ ಕ್ಯಾಲೋರಿ: ಮೊಟ್ಟೆ ಕಡಮೆ ಕ್ಯಾಲೋರಿಗಳನ್ನು ಹೊಂದಿದೆ. ಒಂದು ದೊಡ್ಡ ಮೊಟ್ಟೆಯು ಕೇವಲ 78 ಕ್ಯಾಲೋರಿಗಳನ್ನು ಹೊಂದಿದೆ ಎಂದು ಸಂಶೋಧನೆಯೊಂದು ಹೇಳುತ್ತದೆ. ದಿನಕ್ಕೆ ಸಾಕಾಗುವಷ್ಟು ಪ್ರೊಟೀನ್ ನೀಡುವ ಮತ್ತು ಕೊಬ್ಬು ಕರಗಿಸುವ ಶಕ್ತಿಯನ್ನು ಹೊಂದಿದೆ.
