ಬೆಳಗಾವಿ, ನ. 6 : ನಿಮ್ಮ ಜೊತೆ ನಾನಿದ್ದೇನೆ ಯಾರಿಗೂ ಹೆದರಬೇಕಾಗಿಲ್ಲ ಎಂದು ಮಹಿಳೆ ಕಮಲವ್ವ ಎಂಬಾಕೆಗೆ ಸತೀಶ್ ಜಾರಕಿಹೊಳಿ ಧೈರ್ಯ ತುಂಬಿದ ಘಟನೆ ಬುಧವಾರ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಅಳಲು ತೋಡಿಕೊಂಡ ಮಹಿಳೆಗೆ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ.
ಪಾಮಲದಿನ್ನಿ ಗ್ರಾಮದ ಹಳ್ಳಕ್ಕೆ ಚಿಕ್ಕ ಸೇತುವೆ, ರಸ್ತೆ ಮಾಡಿಕೊಡುವಂತೆ ಕೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ, ಈ ಕುರಿತು ಮಹಿಳೆಯರೆಲ್ಲ ಸೇರಿ ರಮೇಶ್ ಜಾರಕಿಹೊಳಿಗೆ ನೇರವಾಗಿ ಭೇಟಿಯಾಗ್ತೀವಿ ಅಂದರು, ನಮ್ಮನ್ನು ಅವರ ಬೆಂಬಲಿಗರು ಬಿಡಲ್ಲ, ಹುಚ್ಚನಾಯಿ ತರಾ ಓಡ್ಸತ್ತಾರೆ ಎಂದು ಸತೀಶ್ ಜಾರಕಿಹೊಳಿ ಬಳಿ ದೂರು ಕೊಟ್ಟರು.