ಬೆಂಗಳೂರು, ನ. 01: ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರಂಗನಾಯಕಿ ಚಿತ್ರ ತೆರೆ ಕಂಡಿದೆ. ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿದ್ದ ಕ್ರೇಜ್ ಸಣ್ಣ ಮಟ್ಟದ್ದೇನಲ್ಲ. ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರಂಗನಾಯಕಿ ಚಿತ್ರ ತೆರೆ ಕಂಡಿದೆ. ದಯಾಳ್ ಪದ್ಮನಾಭನ್ ಚಿತ್ರಗಳ ಫ್ಲೇವರ್ನ ಪರಿಚಯ ಇರುವವರಿಗೆ ಅವರು ನಿರ್ದೇಶನ ಮಾಡೋ ಪ್ರತೀ ಚಿತ್ರಗಳ ಬಗ್ಗೆಯೂ ಒಂದು ಕೌತುಕ ಇದ್ದೇ ಇರುತ್ತದೆ. ಆದರೆ ರಂಗನಾಯಕಿ ವಿಚಾರದಲ್ಲಿ ಅದು ತುಸು ಹೆಚ್ಚೇ ಇತ್ತು. ನಿರ್ಭಯಾ ಪ್ರಕರಣದಿಂದ ಜೀವ ಪಡೆದ ಕಥೆಯೆಂದ ಮೇಲೆ ಅದರತ್ತ ಅಂಥಾ ಕುತೂಹಲದ ಕಣ್ಣು ನೆಡುವುದು ಸಹಜವೇ. ಎಸ್ ವಿನಾರಾಯಣ್ ಅವರಂಥಾ ಭಿನ್ನ ಅಭಿರುಚಿಯ ನಿರ್ಮಾಪಕರು, ಅದಿತಿ ಪ್ರಭುದೇವ ಎಂಬ ಪ್ರತಿಭಾವಂತ ನಟಿ ಮತ್ತು ದಯಾಳ್ ಅವರ ಸೂಕ್ಷ್ಮ ಕುಸುರಿಯ ನಿರ್ದೇಶಕನ ಜುಗಲ್ಭಂಧಿಯೊಂದಿಗೇ ಈ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದೆ.