ಬೆಳಗಾವಿ (ಚಿಕ್ಕೋಡಿ) ಅ, 30 : ವಿಷಾಹಾರ ಸೇವಿಸಿ ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಭಾಗ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ಜಿಲ್ಲೆಯ ಚಿಂಚಲಿ ಪಟ್ಟಣದ ಯೋಧ ಹನುಮಂತ ಕುಂಬಾರ ಅವರಗೆ ಸೇರಿದ ಮಕ್ಕಳಾದ ಐಶ್ವರ್ಯ(4) ಮತ್ತು ಜಯಶ್ರೀ(6) ವಿಷಾಹಾರ ಸೇವಿಸಿ ಮೃತ ಪಟ್ಟ ದುರ್ದೈವಿಗಳು. ಇಬ್ಬರು ಮಕ್ಕಳು ಆದಾಯಕ್ಕಾಗಿ ಕಾಳಿನ ವ್ಯಾಪಾರ ಮಾಡುತ್ತಿದ್ದರು.
ವ್ಯಾಪಾರಕ್ಕೆ ತಂದಿಟ್ಟಿದ್ದ ಕಾಳಿಗೆ ಕ್ರಿಮಿಕೀಟಗಳು ಬರಬಾರದೆಂದು ಅದರ ಸುತ್ತ ಕ್ರೀಮಿನಾಶಕ ಹೊಡೆಯುತ್ತಿದ್ದ ವೇಳೆ ಅದರ ಅಂಶ ಗಾಳಿಗೆ ಮಕ್ಕಳು ಹಾಗೂ ತಾಯಿ ಬಾಯಿಗೆ ಸೇರಿತ್ತು ಎನ್ನಲಾಗಿದೆ. ಪತ್ನಿ ಕವಿತಾ ಅಸ್ವಸ್ಥಗೊಂಡಿದ್ದು, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.