ಮುಂಬೈ, ಅ. 30 : ಐಶ್ವರ್ಯ ರೈ ಸಹಾಯಕಿಯನ್ನು ರಕ್ಷಿಸಲು ಹೋಗಿ ಬಾಲಿವುಡ್ ನ ಶಾರುಖ್ ಖಾನ್ ಗಾಯಗೊಂಡಿದ್ದಾರೆ.ಶಾರುಖ್ ಖಾನ್ ಎಷ್ಟು ಸ್ನೇಹಪರ ವ್ಯಕ್ತಿತ್ವದವರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಐಶ್ವರ್ಯ ರೈ ಮ್ಯಾನೇಜರ್ ಅವರನ್ನು ಕಾಪಾಡಿ ಸಮಯಪ್ರಜ್ಞೆ ಮೆರೆದ ಶಾರುಖ್ ಕಾರ್ಯಕ್ಕೆ ಬಾಲಿವುಡ್ ಸ್ಟಾರ್ಗಳು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೆರೆ ಮೇಲೆ ಬಾಲಿವುಡ್ ಶಾರುಖ್ ಖಾನ್ ಕಷ್ಟದಲ್ಲಿರುವವರಿಗೆ ನೆರವಾಗುವ ಹೀರೋ ಆಗಿರಬಹುದು. ನಿಜ ಜೀವನದಲ್ಲೂ ಅದೇ ಕೆಲಸ ಮಾಡಲು ಹೋಗಿ ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್ ಏಜೆಂಟ್ ಅರ್ಚನಾ ಸದಾನಂದ ಅವರನ್ನು ರಕ್ಷಿಸಲು ಹೋಗಿ ತಾವೇ ಗಾಯಗೊಂಡಿದ್ದಾರೆ.
ಅಕಸ್ಮಾತ್ತಾಗಿ ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿತ್ತು. ಇದನ್ನು ಗಮನಿಸಿದ ಶಾರುಖ್ ತಕ್ಷಣವೇ ಅವರನ್ನು ರಕ್ಷಿಸಿದ್ದು ತಾವೇ ಸಣ್ಣ ಪುಟ್ಟ ಗಾಯಮಾಡಿಕೊಂಡಿದ್ದಾರೆ. ಅರ್ಚನಾಗೂ ಗಾಯವಾಗಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.