ದೇವನಹಳ್ಳಿ, ಅ. 30: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ಸಂಸ್ಥಾನದ ಮೀಸಲಾತಿಗೆ 100 ನೇ ವರ್ಷದ ನೆನಪಿನಲ್ಲಿ ಸರ್ವಜನರ ಸಂವಿಧಾನ ಸಮಾವೇಶವು ಅ.31 ರಂದು ಬೆಳಿಗ್ಗೆ 11ಗಂಟೆಗೆ ನಗರದ ಗಿರಿಯಮ್ಮ ವೃತ್ತದಲ್ಲಿರುವ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮತ್ತು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸರ್ವಜನರ ಸಂವಿಧಾನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಮೀಸಲಾತಿ ಜಾರಿಗೊಳಿಸಿ 100 ವರ್ಷ ಸಂದಿರುವುದನ್ನು ಸ್ಮರಿಸಲು ಖಾಸಗಿ ಕ್ಷೇತ್ರದಲ್ಲಿ ಸಾಮಾಜಿಕ ಪಾಲುದಾರಿಗೆ ಮೀಸಲಾತಿಗೆ ಆಗ್ರಹಿಸಿ ಸರ್ವಜನರ ಸಂವಿಧಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಿಸಲಾತಿ ಎನ್ನುವ ಪದ ಸರಿಯಾದ ಗ್ರಹಿಕೆ ಗಿಂತ ಅನರ್ಥ ಅಪಪ್ರಚಾರವೇ ಹೆಚ್ಚಾಗುತ್ತಿದೆ. ವಿಧ್ಯಾವಂತರು ಮೀಸಲಾತಿಯನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿರುವುದು ಅಘಾತಕಾರಿ. ಮೀಸಲಾತಿ ಪದವು ಕಿವಿಗೆ ಬಿದ್ದ ಕೂಡಲೇ ಕಸಿವಿಸಿ ಗೊಳ್ಳು ಈ ಕಾಲ ಘಟ್ಟದಲ್ಲಿ ಮೀಸಲಾತಿ ಬಗೆಗಿನ ವಸ್ತು ನಿಷ್ಠ ಗ್ರಹಿಕೆ ಅತ್ಯಂತ ತುರ್ತುತಾಗಿ ನಡೆಯಬೇಕಾಗಿದೆ ಎಂದರು.
ಸಾನಿದ್ಯವನ್ನು ಟಿ ನರಸೀಪುರ ನಳಂದ ಬುದ್ಧ ವಿಹಾರದ ಬಂತೇಜಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಉದ್ಘಾಟಿಸಲಿದ್ದಾರೆ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಎಲ್ ಎನ್ ನಾರಾಯಣಸ್ವಾಮಿ ಮಾಲಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಚ್ ಸಿ ಮಹದೇವಪ್ಪ, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ ನಾಯಕ್, ಅಹಿಂದ ನಾಯಕ ಫ್ರೊÃ.ಎನ್ ವಿ ನರಸಿಂಹಯ್ಯ, ಸಾಮಾಜಿಕ ಹೋರಾಟಗಾರ ರವಿ ಕೃಷ್ಣ ರೆಡ್ಡಿ, ರಾಜ್ಯ ಸಮಿತಿ ಸದಸ್ಯ ರಮೇಶ್ ಡಾಕುಳಗಿ, ತಾಪಂ ಅಧ್ಯಕ್ಷೆ ಚೈತ್ರಾ, ಸದಸ್ಯ ಗೋಪಾಲಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಆವತಿ ತಿಮ್ಮರಾಯಪ್ಪ, ಜೋಗಿ ಹಳ್ಳಿ ನಾರಾಯಣಸ್ವಾಮಿ, ತಾಲೂಕು ಸಂಚಾಲಕ ಅತ್ತಿಬೆಲೆ ನರಸಪ್ಪ, ಜಿಲ್ಲಾ ಸಮಿತಿ ಸದಸ್ಯ ಎಚ್ ಕೆ ವೆಂಕಟೇಶಪ್ಪ, ಮುಖಂಡರಾದ ನಾರಾಯಣಸ್ವಾಮಿ, ರಮೇಶ್, ಮತ್ತಿತರರು ಇದ್ದರು.