ಎಂಟಿಬಿ ಗೆ ಮುಸ್ಲಿಂ ಮುಖಂಡರ ಬೆಂಬಲ

ಎಂಟಿಬಿ ಗೆ ಮುಸ್ಲಿಂ ಮುಖಂಡರ ಬೆಂಬಲ

ಹೊಸಕೋಟೆ, ಅ. 30: ಮುಂದಿನ ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜು ಅವರನ್ನು ಬೆಂಬಲ ಮುಸ್ಲಿಂ ಮುಖಂಡರು ತಿಳಿಸಿದರು. ಅವರು ಹೊಸಕೊಟೆ ಪಟ್ಟಣದ ಎಂಟಿಬಿ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರಾದ ಜಮೀಯಾ ಮಸೀದಿಯಾ ಅಹಮದ್ ನವಾಜ್, ಮತ್ತು ಇನಾಯಿತುಲ್ಲಾ, ಗುಲ್ಜಾರ್ ಮಾತನಾಡಿ ಮುಂದೆ ಬರುವ ಉಪಚುನಾವಣೆ ವ್ಯಕ್ತಿಗತವಾಗಿ ನಾವು ಮಾಜಿ ಶಾಸಕ ಎಂಟಿಬಿ ನಾಗರಾಜಣ್ಣನವರನ್ನು ಬೆಂಬಲಿಸುತ್ತೆವೆ.

ನಮ್ಮ ಜನಾಂಗದ ಗುಲಾಬ್ ಜಾನ್ ಅವರನ್ನು ಪಟ್ಟಣದ ಪ್ರಥಮ ಪ್ರಜೆ ನಗರಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದು ಒಂದು ಇತಿಹಾಸ. ಪಟ್ಟಣದಲ್ಲಿ ಈ ಹಿಂದೆ ಕುಡಿಯುವ ನೀರಿಗೆ ಹಾಹಾಕಾರವಿತ್ತು. 20 ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಆದರೆ ಈಗ ನಾಲ್ಕರಿಂದ ಐದು ದಿನಗಳೊಳಗಾಗಿ ಪ್ರತಿ ವಾರ್ಡಿನಲ್ಲಿ ನೀರು ಬರುತ್ತದೆ.

ಕಾಂಕ್ರೀಟ್ ರಸ್ತೆಗಳು, ಅಲ್ಪಸಂಖ್ಯಾತರಿರುವ ಕಡೆ ಮೂಲಭೂತ ಸೌಕರ್ಯಗಳನ್ನು ಇಲ್ಲಿಯವೆಗೂ ಯಾರು ಮಾಡಿಲ್ಲ. ಈದ್ಗಾ ಮೈದಾನವನ್ನು 30 ವರ್ಷಗಳಿಂದ ಹಿಂದೆ ಇದ್ದ ಬಿಜೆಪಿಯ ಬಚ್ಚೇಗೌಡರು ಬಗೆಹರಿಸಿಲ್ಲ. ನಮ್ಮ ನಾಗರಾಜಣ್ಣನವರು ಅದನ್ನು ಬಗೆಹರಿಸಿ. ಸಾವಿರಾರು ಮುಸ್ಲಿಂ ಭಾಂದವರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಮಸೀದಿಗಳಿಗೆ ಕಾರ್ಪೆಟ್ ನಿಡಿದ್ದಾರೆ. ಹಾಗೂ ಮಶಾಣದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ನಮ್ಮ ಜನಾಂಗದವರು ವಾಸಿಸುವ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮಸೀದಿ ಮುಂದಿನ ರಸ್ತೆ ಹದಗೆಟ್ಟಿತ್ತು ಅದನ್ನು ಮಾಡಿಸಿದ್ದಾರೆ. ಒಟ್ಟಾರೆ ಮುಸ್ಲಿಂ ಬಾಂದವಿಗೆ ಅಲ್ಲದೆ ಎಲ್ಲಾ ಜಾತಿ ಜನಾಂಗದ ಏಳಿಗೆಗೆ ಶ್ರಮಿಸಿದ್ದಾರೆ. ಅವರು ಯಾವುದೇ ಪಕ್ಷದಲ್ಲಿ ಉಪಚುನಾವಣೆ ಎದುರಿಸಿದಲ್ಲಿ ನಮ್ಮ ಜನಾಂಗ ಅವರ ಜೋತೆ ಇರುತ್ತೆ. ತಾಲ್ಲೂಕಿನಾದ್ಯಂತ ನಾವು ನಮ್ಮ ಜನಾಂಗವನ್ನು ಬೇಟಿ ಮಾಡಿ ಎಂಟಿಬಿಗೆ ಮತ ನೀಡುವಂತೆ ಮಾಡುತ್ತೇವೆ ಎಂದರು.

ಕೆಲವರಿಗೆ ಈಗ ಜ್ಞಾನೋಧಯವಾಗಿದೆ. ನಮ್ಮ ಜನಾಂಗದ ಬಗ್ಗೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಗುಲ್ಜಾರ್ ಅಂಕಿ ಅಂಶಗಳ ಸಮೇತ ವಿವರಿಸಿದರು. ಅಪ್ ಸರ್, ನಯಾಜ್, ಅನ್ವರ್, ಜಾವೀದ್, ಟಬ್ಬು, ಅನ್‌ಸರ್, ಶೌರತ್, ಇತರರು ಹಾಜರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos