ಪೊಲೀಸರ ಭರ್ಜರಿ ಬೇಟೆ

ಪೊಲೀಸರ ಭರ್ಜರಿ ಬೇಟೆ

ದೊಡ್ಡಬಳ್ಳಾಪುರ, ಅ. 29: ವೀಲಿಂಗ್ ಪುಂಡರು ಹೆದ್ದರಿಗಳಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಗ್ಯಾಂಗ್ ಒಂದನ್ನು ದೊಡ್ಡಬಳ್ಳಾಪುರ ಪೊಲೀಸರ ಬಂಧಿಸಿದ್ದಾರೆ. ದೇವನಹಳ್ಳಿ, ರಾಜಾನುಕುಂಟೆ, ಹೆಬ್ಬಳ, ಆರ್.ಟಿ.ನಗರ, ಯಲಹಂಕ, ನೆಲಮಂಗಲ, ಹೆರಘಟ್ಟ, ದಾಬಾಸ್ಪೇಟ್ ಹೆದ್ದಾರಿಗಳಲ್ಲಿ ಹುಚ್ಚಾಟ ಮಾಡುತ್ತಿದ್ದ ಪಡ್ಡೆ ಗ್ಯಾಂಗ್ ಕೊನೆಗೂ ಖಾಕಿ ಕೈ ಸೇರಿದೆ.

ಬರಿ ತಡರಾತ್ರಿಯೇ ರಸ್ತೆಗೆ ಇಳಿಯುತ್ತಿದ್ದ ಪಡ್ಡೆಗಳ ಗ್ಯಾಂಗ್ ಹೆದ್ದಾರಿಗಳಲ್ಲಿ ಸಾರ್ವಜನಿಕರಿಗೆ ತೀರ್ವ ಕಿರುಕುಳ ನೀಡುತ್ತಿದ್ದರು.

ಹಲವು ದಿನಗಳಿಂದ ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ಪಿ.ಎಸ್.ಐ ವೆಂಕಟೇಶ್ ಅಂಡ್ ಟೀಂ, ಮಫ್ತಿಯಲ್ಲಿ ಇಡೀ ಬೆಂಗಳೂರು ಸೇರಿ ಸುತ್ತಮುತ್ತಲ ಭಾಗದಲ್ಲಿ ಕಾರ್ಯಾಚರಣೆ ಮಾಡಿದ್ದ ಟೀಂ ಹೆದ್ದಾರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಗ್ಯಾಂಗ್‍ಗಳ ಮೇಲೆ ತೀರ್ವ ನಿಗ ಇರಿಸಲಾಗಿತ್ತು. ತಾವು ಪಡ್ಡೆ ಹುಡುಗರ ಹಾಗೆಯೆ ರಸ್ತೆಗೆ ಇಳಿದಿದ್ದ ಪಿ.ಎಸ್.ಐ ವೆಂಕಟೇಶ್ ಅಂಡ್ ಟೀಂ, ನಿನ್ನೆ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಹೊರವಲಯಕ್ಕೆ ವೀಲಿಂಗ್ ಟೀಂ ಬರುತ್ತಿದ್ದ ಹಾಗೆ ದಾಳಿ ನಡೆಸಿದ್ದಾರೆ.

ಹತ್ತು ವೀಲಿಂಗ್ ಮಾಡುತ್ತಿದ್ದ ಬೈಕ್ ಮತ್ತು 12 ಜನರ ಬಂಧನ ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ.

ಫ್ರೆಶ್ ನ್ಯೂಸ್

Latest Posts

Featured Videos