ಕೆ.ಆರ್.ಪುರ, ಅ. 29: ರಾಮಮೂರ್ತಿನಗರದ ಪುಣ್ಯಭೂಮಿ ಸೇವಾ ಪೌಂಡೇಶನ್ ಅಧ್ಯಕ್ಷರು, ಸದಸ್ಯರು, ಬಿಬಿಎಂಪಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡರು.
ನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರು ಹಬ್ಬದ ದಿನವೂ ಕಾರ್ಯ ನಿರ್ವಹಿಸುತ್ತಾರೆ ಅವರೂ ಸಹ ನಮ್ಮಂತೆ ಹಬ್ಬ ಅಚರಣೆ ಮಾಡಬೇಕೆಂಬ ಉದ್ದೇಶದಿಂದ ಪುಣ್ಯಭೂಮಿ ಸೇವಾ ಪೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಹೊಸ ಬಟ್ಟೆ, ಕಾಣಿಕೆ ನೀಡಿ ಅವರೊಂದಿಗೆ ಊಟ ಸೇವಿಸಿದರು.
ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕೆಂದು ಪುಣ್ಯಭೂಮಿ ಸೇವಾ ಪೌಂಡೇಶನ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ಹೇಳಿದರು. ಈ ಸಂದರ್ಭದಲ್ಲಿ ಪುಣ್ಯ ಭೂಮಿ ಫೌಂಡೇಶನ್ ಸಂಸ್ಥಾಪಕ ಕೃಷ್ಣಮೂರ್ತಿ, ಮುಖಂಡ ಮಧು ಸೇರಿದಂತೆ ಇತರರು ಹಾಜರಿದ್ದರು.