ನವದೆಹಲಿ, ಅ. 26 : ಟೀಂ ಇಂಡಿಯಾದ ಆಟಗಾರ ವೃದ್ಧಿಮಾನ್ ಸಾಹಾ ಮನೆಗೆ ಶೀಘ್ರವೇ ಹೊಸ ಅತಿಥಿಯ ಆಗಮನವಾಗಲಿದೆ. ಪತ್ನಿ ಎರಡನೇ ಮಗುವಿಗೆ ಶೀಘ್ರವೇ ಜನ್ಮ ನೀಡಲಿದ್ದಾರೆಂದು ವೃದ್ಧಿಮಾನ್ ಸಾಹಾ ಹೇಳಿದ್ದಾರೆ.
ಟ್ವೀಟರ್ ಮೂಲಕ ವೃದ್ಧಿಮಾನ್ ಸಾಹಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಈ ಬಾರಿ ಹುಟ್ಟುಹಬ್ಬ ವಿಶೇಷವಾಗಿದೆ. ಶೀಘ್ರವೇ ನಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗ್ತಿದೆ. ನಾವು ಎರಡನೇ ಬಾರಿ ಪೋಷಕರಾಗ್ತಿದ್ದೇವೆ. ಇದನ್ನು ಹೇಳಲು ತುಂಬ ಖುಷಿಯಾಗ್ತಿದೆ ಎಂದು ವೃದ್ಧಿಮಾನ್ ಸಾಹಾ ಟ್ವಿಟ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡಿದ ನಂತ್ರ ವಿಕೆಟ್ ಕೀಪಿಂಗ್ ಗೆ ವೃದ್ಧಿಮಾನ್ ಸಾಹಾ, ಕೊಹ್ಲಿಯ ಮೊದಲ ಆಯ್ಕೆಯಾಗಿತ್ತು.