ಆನೇಕಲ್, ಅ. 26: ನಗರದಲ್ಲಿ ಮೆಟ್ರೋ ನಿದಾನಗತಿಯ ಕಾರ್ಯದಿಂದ ನಿತ್ಯ ವಾಹನ ಸವಾರರು ಸಾಕಷ್ಟು ಕಿರಕಿರಿಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಹೊಸೂರು ಮುಖ್ಯರಸ್ತೆಯಲ್ಲೂ ವಾಹನದಟ್ಟಣೆಗೇನು.ಕಡಿಮೆ ಇಲ್ಲ ಈ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು ಓಡಾಡಲು ಹಿಡಿಶಾಪ ಹಾಕುತ್ತಾರೆ.
ಹೊಸೂರು ಮುಖ್ಯರಸ್ತೆಯಲ್ಲಿನ ಆನೇಕಲ್ ನಲ್ಲಿ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಅಲ್ಲಿ ಓಡಾಡುವ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮೆಜೆಸ್ಟಿಕ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಬಸ್ ನಲ್ಲಿ ಹೋಗಲು 1ರಿಂದ 2 ಗಂಟೆ ತನಕ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಆನೇಕಲ್ ನಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೆಟ್ರೋ ರೈಲನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ನೂರಾರು ಜನ ಕಾರ್ಯಕರ್ತರು ಬೀದಿಗಿಳಿದರು.
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮೆಟ್ರೋ ರೈಲನ್ನು ಬೆಂಗಳೂರು ಕೇಂದ್ರದಿಂದ ಅತ್ತಿಬೆಲೆವರೆಗೆ ಅನುಮತಿ ನೀಡಿದ್ದರು. ಆದರೆ, ಕುಮಾರಸ್ವಾಮಿ ನೇತೃತ್ವದ ಸಮ್ಮೀಶ್ರ ಸರ್ಕಾರ ಬೊಮ್ಮಸಂದ್ರ ವರಗೆ ಮಾತ್ರ ಅನುಮತಿ ನೀಡಿರುವುದನ್ನು ಖಂಡಿಸಿ ಬೊಮ್ಮಸಂದ್ರದ ವೃತ್ತದಲ್ಲಿ ಹಲವು ಕನ್ನಡಪರ ಸಂಘಟನೆಗಳು, ಶಾಲಾ ವಿದ್ಯಾರ್ಥಿಗಳು ಒಂದುಗೂಡಿ ಪ್ರತಿಭಟನೆ ನಡೆಸಿದರು. ಕನ್ನಡ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದ ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲಕಾಲ ಸಂಪೂರ್ಣವಾಗಿ ಜಾಮ್ ಆಗಿತ್ತು.