ಬೆಳಗಾವಿ, ಅ.26 : ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದು ಪಡಿಸುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಜನರು ಕ್ಷಿಪ್ರಗತಿಯಲ್ಲಿ ಸ್ವೀಕರಿಸಿದ್ದು, ಸರ್ಕಾರದ ಕ್ರಮ ಯಶಸ್ವಿಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಬೆಳಗಾವಿ ನಗರದಿಂದ 45 ಕಿಮೀ ದೂರದಲ್ಲಿರುವ ಐತಿಹಾಸಿಕ ಸ್ಥಳ ಕಿತ್ತೂರಿನಲ್ಲಿ ಅ.25 ರಂದು ರಾತ್ರಿ ಆಯೋಜಿಸಲಾಗಿದ್ದ ಮೂರು ದಿನಗಳ ಕಿತ್ತೂರು ಉತ್ಸವ-2019 ಸಮಾರೋಪ ಸಮಾರಂಭ ಉದ್ದೇಶಿಸಿ ಸಚಿವರು ಮಾತನಾಡಿದರು.
ಸಂವಿಧಾನದ 370 ವಿಧಿ ರದ್ದತಿಯ ನಂತರ ಕಾಶ್ಮೀರ ದೇಶದ ಇತರ ರಾಜ್ಯಗಳಂತಾಗಿದೆ. ಈಗ ನಮ್ಮ ಕಿತ್ತೂರಿನ ಹುಡುಗ ಕಾಶ್ಮೀರಿ ಹುಡುಗಿಯನ್ನು ವಿವಾಹವಾಗಬಹುದು….! ಕಾಶ್ಮೀರಿ ಹುಡುಗಿ ಕಿತ್ತೂರಿನ ಹುಡುಗನನ್ನು ಮದುವೆಯಾಗಬಹುದು ಎಂದರು.