ಬೆಂಗಳೂರು, ಅ. 25: ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಗೆ ಮೃದುವಾದ, ಕೋಮಲ ತುಟಿಗಳನ್ನು ಬಯಸುತ್ತಾರೆ. ಯಾಕೆಂದರೆ ಸುಂದರ ತುಟಿಗಳಿಂದ ಮಹಿಳೆಯರ ಅಂದ ಕೂಡ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ವಾತಾವರಣದಲ್ಲಿನ ಬದಲಾವಣೆ, ಕೊಳೆ, ಧೂಳಿನಿಂದ ತುಟಿ ಡ್ರೈ ಆಗುತ್ತದೆ. ನೀರು ಕುಡಿಯಿರಿ: ದೇಹದಲ್ಲಿ ನೀರಿನ ಕೊರತೆಯಿಂದಾಗಿ ತುಟಿ ಒಣಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.
ಬಾದಾಮ್ ಎಣ್ಣೆ: ಬಾದಾಮ್ ಎಣ್ಣೆ ಒಣ ತುಟಿಗೆ ಹಾಗೂ ಒಡೆದ ತುಟಿಗೆ ಹಚ್ಚಿ. ಪ್ರತಿದಿನ ಒಂದೆರಡು ಹನಿ ಬಾದಾಮ್ ಎಣ್ಣೆಯನ್ನು ತುಟಿಗೆ ಹಚ್ಚುವುದರಿಂದ ತುಟಿ ಕೋಮಲವಾಗಿರುತ್ತದೆ.
ಜೇನು : ಜೇನು ತುಪ್ಪವನ್ನು ತುಟಿಗೆ ಹಚ್ಚುವುದರಿಂದ ಒಡೆದ ತುಟಿ ಸಮಸ್ಯೆ ನಿವಾರಣೆಯಾಗಿ ಕೋಮಲವಾಗುತ್ತದೆ.
ಲಿಪ್ ಬಾಮ್ ಹಚ್ಚಿ: ರಾತ್ರಿ ಮಲಗುವಾಗ ತುಟಿಗೆ ಲಿಪ್ಬಾಮ್ ಹಚ್ಚಿ ಮಲಗಿ. ಇದರಿಂದ ತುಟಿ ಮಾಯಿಶ್ಚರೈಸರ್ ಹಾಗೆಯೇ ಇರುತ್ತದೆ.
ಗ್ಲಿಸರೀನ್: ಗ್ಲಿಸರೀನ್ ಕೇವಲ ಸ್ಕಿನ್ಗೆ ಮಾತ್ರವಲ್ಲ ತುಟಿಗೂ ಹಚ್ಚಿ. ಇದು ನಿಮ್ಮ ತುಟಿಯನ್ನು ಮಾಯಿಶ್ಚರೈಸ್ ಆಗಿಸುವಯದರ ಜೊತೆಗೆ ತುಟಿ ಒಣಗುವುದರಿಂದ ತಪ್ಪಿಸುತ್ತದೆ.
ತುಪ್ಪ: ತುಪ್ಪವು ತುಟಿಗಳ ಅಂದವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಸಮಯ ಸಿಕ್ಕಾಗಲೆಲ್ಲಾ ತುಪ್ಪವನ್ನು ತುಟಿಗೆ ಹಚ್ಚಿ. ಇದು ತುಟಿಗೆ ಮಾಯಿಶ್ಚರೈಸ್ ನೀಡುತ್ತದೆ.