ಯೋಧ ಮಗನಿಗೆ ತಾಯಿ ಸಲ್ಯೂಟ್

ಅ. 25 :  ಗಡಿಯಿಂದ ಹಿಂದಿರುಗಿ ಬಂದ ಮಗನಿಗೆ ತಾಯಿ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 12 ಸೆಕೆಂಡ್ ಇರುವ ಈ ವಿಡಿಯೋವನ್ನು ಹತಿಂದರ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಯೋಧರೊಬ್ಬರು ಕರ್ತವ್ಯದಿಂದ ಹಿಂದಿರುಗಿ ಮನೆಯೊಳಗೆ ಹೋಗುವ ಮೊದಲು ತನ್ನ ತಾಯಿಯನ್ನು ನೋಡಿ ಸೆಲ್ಯೂಟ್ ಹೊಡೆಯುತ್ತಾರೆ. ಬಳಿಕ ತಾಯಿ ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಎಲ್ಲ ಸೈನಿಕರು ಹೀಗೆ ಕ್ಷೇಮವಾಗಿ ಮನೆಗೆ ಹಿಂದಿರುಗಲಿ. ಸಾಮಾಜಿಕ ಜಾಲತಾಣದಲ್ಲಿ ನೋಡಿದ ಅತ್ಯುತ್ತಮ ವಿಡಿಯೋ ಇದೆ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಗಡಿಯಿಂದ ಹಿಂದಿರುಗಿದ ಯೋಧ ಮನೆಯ ಮುಖ್ಯದ್ವಾರದ ಬಳಿ ನಿಂತಿದ್ದ ತನ್ನ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ವೇಳೆ ಕೈಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ನಿಂತಿದ್ದ ತಾಯಿ ಕೂಡ ತನ್ನ ಮಗನಿಗೆ ಸೆಲ್ಯೂಟ್ ಮಾಡುತ್ತಾರೆ. ಸೆಲ್ಯೂಟ್ ಮಾಡಿದ ಬಳಿಕ ಯೋಧ ತನ್ನ ತಾಯಿಯನ್ನು ತಬ್ಬಿಕೊಂಡು ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos