ದ್ರೌಪದಿಯಾಗಿ ದೀಪಿಕಾ ಪಡುಕೋಣೆ

ದ್ರೌಪದಿಯಾಗಿ ದೀಪಿಕಾ ಪಡುಕೋಣೆ

ಮುಂಬೈ, ಅ. 25 : ಪದ್ಮಾವತ್ ನಲ್ಲಿ ಐತಿಹಾಸಿಕ ಪಾತ್ರ ಮಾಡಿ ಕ್ಲಿಕ್ ಆಗಿದ್ದ ದೀಪಿಕಾ ಇಲ್ಲಿ ದ್ರೌಪದಿಯಾಗಿ ಹೇಗೆ ಕಾಣಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ದ್ರೌಪದಿ ಆಗಲಿದ್ದಾರೆ. ‘ಮಹಾಭಾರತ’ ಎಂಬ ಪೌರಾಣಿಕ ಹಿನ್ನಲೆಯ ಬಿಗ್ ಬಜೆಟ್ ಸಿನಿಮಾದಲ್ಲಿ ದೀಪಿಕಾ ದ್ರೌಪದಿಯ ಪಾತ್ರ ನಿಭಾಯಿಸಲಿದ್ದಾರೆ. ಸಿನಿಮಾದಲ್ಲಿ ಪಾತ್ರ ಮಾಡುವುದು ಮಾತ್ರವಲ್ಲ, ಸಹ ನಿರ್ಮಾಣ ಜವಾಬ್ಧಾರಿಯನ್ನೂ ಹೊತ್ತುಕೊಳ‍್ಳಲಿದ್ದಾರಂತೆ ದೀಪಿಕಾ. 2021 ರ ವೇಳೆಗೆ ಈ ಸಿನಿಮಾ ಹೊರಬರುವ ನಿರೀಕ್ಷೆಯಿದೆ.  ಸಿನಿಮಾ ನಿರ್ದೇಶಕರು ಮತ್ತು ಇತರ ಪಾತ್ರವರ್ಗದ ಬಗ್ಗೆ ಸದ್ಯದಲ್ಲೇ ತಿಳಿದುಬರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos