ಮೆಕ್ಸಿಕೊ, ಅ.24 : ಪಶ್ಚಿಮ ಮೆಕ್ಸಿಕೋ ಸಿಟಿಯಲ್ಲಿ ಲಘು ವಿಮಾನ ಪತನಗೊಂಡಿದ್ದು, ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ನಿಖರ ಕಾರಣ ತಿಳಿದು ಬಂದಿಲ್ಲ. ಮೆಕ್ಸಿಕೊ ನಗರದ 460 ಕಿ.ಮೀ. ದೂರದ ಮಡೆರಾ ಪಟ್ಟಣದ ಲಾಂಸ್ ಜುಂಟಾಸ್ ಎಂಬಲ್ಲಿ ವಿಮಾನ ಪತನಗೊಂಡಿದೆ ಎಂದು ಮಿಶೋಕನ್ ರಾಜ್ಯ ಪ್ರಾಸಿಕ್ಯೂಟರಿ ಕಾರ್ಯಾಲಯ ತಿಳಿಸಿದೆ.
ಮೃತರ ಗುರುತು ಪತ್ತೆಯಾಗಿಲ್ಲ. ಡಯೂರೈಂಗ್ ನಗರದಿಂದ ವಿಮಾನ ಟೇಕ್ ಆಫ್ ಆಗಿತ್ತು. ಲಾಂಸ್ ಜುಂಟಾಸ್ ಬಳಿಯ ನದಿಯಲ್ಲಿ ವಿಮಾನ ಪತನಗೊಂಡಿದ್ದು, ಪ್ಲೇನ್ ನಲ್ಲಿ ಒಟ್ಟು ಆರು ಜನರು ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.