ಪ್ರಧಾನಿ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸದೇ ಅಗೌರವ ತೋರಿದ್ದಾರೆ: ಡಿಸಿಎಂ

ಪ್ರಧಾನಿ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸದೇ ಅಗೌರವ ತೋರಿದ್ದಾರೆ: ಡಿಸಿಎಂ

ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿಯವರು ಸಿದ್ಧಗಂಗಾ ಶ್ರೀಗಳ
ಅಂತಿಮ ದರ್ಶನಕ್ಕೆ ಆಗಮಿಸದೇ ಅಗೌರವ
ತೋರಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ವಿಧಾನಸೌಧ ಬಳಿ ನೇತಾಜಿ ಸುಭಾಷ್ ಚಂದ್ರಬೋಸ್‌ ಅವರ ಪ್ರತಿಮೆಯನ್ನು ಅವರು ಲೋಕಾರ್ಪಣೆ  ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಿತ್ತು. ಇಡೀ ದೇಶವೇ ಶ್ರೀಗಳನ್ನು ಕಾಣಲು ಆಗಮಿಸಿದ್ದರೂ ಪ್ರಧಾನಿ ಮಾತ್ರ ಬಾರದೇ ಇದ್ದದ್ದು ಸರಿಯಲ್ಲ ಎಂದು ಹೇಳಿದರು.

ಮೋದಿಯವರು ಪ್ರಧಾನಿಯಂಥ ಹುದ್ದೆಯಲ್ಲಿದ್ದರೂ ಆಗಮಿಸದೇ ಇರುವುದು ಶ್ರೀಗಳಿಗೆ, ಸಮಾಜಕ್ಕೆ ಅಗೌರವ ತೋರಿಸಿದಂತೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos