ಕೆ.ಆರ್.ಎಸ್.ಗೆ ಭೇಟಿ ನೀಡಿದ ಸಿ.ಡ್ಲೂ.ಸಿ

ಕೆ.ಆರ್.ಎಸ್.ಗೆ ಭೇಟಿ ನೀಡಿದ ಸಿ.ಡ್ಲೂ.ಸಿ

ಮಂಡ್ಯ, ಅ. 19:  ಕೆ.ಆರ್ ಎಸ್ ಅಣೆಕಟ್ಟೆಗೆ ಕೇಂದ್ರ ಜಲ ಆಯೋಜಕ ಸಮಿತಿ ಸದಸ್ಯರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ಜಲ ಆಯೋಗ ಸಮಿತಿಯ ದಕ್ಷಿಣ ವಿಭಾಗದ ಮುಖ್ಯ ಅಭಿಯಂತರ ಸುಶೀಲ್ ಕುಮಾರ್ ನೇತೃತ್ವದ ತಂಡ ನೀರು ಸಂಗ್ರಹಣೆ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಚರ್ಚಿಸಿದರು.

ಬಳಿಕ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಬಿ.ರಾಜು ಹಾಗೂ ಇತರೆ ಅಧಿಕಾರಿಗಳ ಜತೆ ಮಾಹಿತಿ ವಿನಿಮಯ ಮಾಡಿಕೊಂಡರು, ನಂತರ ಅಣೆಕಟ್ಟೆಯಲ್ಲಿನ ರಾಜ್ಯದ ನೀರು ಮಾಪಕ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟೆಲಿಮೆಟ್ರಿ ರೇಡಾರ್ ನೀರು ಅಳತೆ ಮಾಪಕ ಸಮರ್ಪಕವಾಗಿ ಕೆಲಸ ಮಾಡುತ್ತಿರವ ಬಗ್ಗೆ ಪರಿಶೀಲನೆಗೊಸ್ಕರ ಕೇಂದ್ರ ಜಲ ಆಯೋಗದ ಅಧಿಕಾರಿ ಭೇಟಿ ನೀಡಿದ್ದರು. ಅಣೆಕಟ್ಟೆಯಿಂದ ಕಾವೇರಿ ನದಿ ಹರಿಯುವ ಎರಡು ಸ್ಥಳಗಳಲ್ಲಿಯೂ ಟೆಲಿಮೆಟ್ಟರಿ ರಡಾರ್ ಜಲ ಅಳತೆ ಯಂತ್ರಗಳನ್ನು ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos